Sunday, June 7, 2026
Homeಕರಾವಳಿಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ :43,88,400 ರೂ.ಮೌಲ್ಯದ ಚಿನ್ನ ವಶ !

ಮಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ :43,88,400 ರೂ.ಮೌಲ್ಯದ ಚಿನ್ನ ವಶ !

- Advertisement -
- Advertisement -

ಮಂಗಳೂರು : ದುಬೈನಿಂದ ಬರುತ್ತಿದ್ದ ವ್ಯಕ್ತಿಯ್ಯೋರ್ವನೂ ಚಿನ್ನವನ್ನು ಪೌಡರ್ ರೂಪಕ್ಕಿಳಿಸಿ ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ‌

ಬಂಧಿತನನ್ನು ಕಾಸರಗೋಡು ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದು, ಈತನನ್ನು ಪರಿಶೀಲಿಸಿದಾಗ ಆತ ಧರಿಸಿದ್ದ ಒಳ ಚಡ್ಡಿಯಲ್ಲಿ ವಿಶೇಷವಾಗಿ ತಯಾರಿಸಿದ್ದ ಪ್ಯಾಕೆಟ್ ನಲ್ಲಿ ಪೌಡರ್ ರೂಪಕ್ಕಿಳಿಸಿದ 43,88,400 ರೂ. ಮೌಲ್ಯದ 920 ಗ್ರಾಂ ಚಿನ್ನವು ಪತ್ತೆಯಾಗಿದೆ.ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಆರೋಪಿ ಸಹಿತ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!