Thursday, June 4, 2026
HomeUncategorizedಚಾರ್ಮಾಡಿ: ಅಕ್ರಮ ಗೋ ಸಾಗಾಟ,ಜಾನುವಾರು,ವಾಹನ ವಶ

ಚಾರ್ಮಾಡಿ: ಅಕ್ರಮ ಗೋ ಸಾಗಾಟ,ಜಾನುವಾರು,ವಾಹನ ವಶ

- Advertisement -
- Advertisement -

ಚಾರ್ಮಾಡಿ : ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಧರ್ಮಸ್ಥಳ ಪೊಲೀಸ್ ಠಾಣಾ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬುಧವಾರದಂದು ಬಂಧಿಸಿದ್ದಾರೆ.

ಚಾರ್ಮಾಡಿ ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಚಿಕ್ಕಮಗಳೂರು ಕಡೆಯಿಂದ ಬಂದ ಕೆ.ಎ. 18 ಸಿ 3283 ನೇ ನೊಂದಣಿ ಸಂಖ್ಯೆಯ ಟಾಟಾ ಎಸಿ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಸದ್ರಿ ವಾಹನದಲ್ಲಿ ಸಾಧಾರಣ ಗಾತ್ರದ 2 ಹೋರಿ ಹಾಗೂ 1 ಹಸುವನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ವಾಹನದ ಚಾಲಕ ಸುರೇಶ ಎಂಬವರನ್ನು ವಿಚಾರಿಸಿದಾಗ ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದಿರದ ಕಾರಣ ಆರೋಪಿಗಳು ದನವನ್ನು ಖರಿದಿಸಿ ಅದರ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಹಿಂಸಾತ್ಮಕವಾಗಿ ಗೋವುಗಳನ್ನು ತುಂಬಿಸಿದ್ದರು ಎನ್ನಲಾಗಿದೆ. ಸದ್ಯ ವಾಹನ ಸಹಿತ ಜಾನುವಾರುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!