Friday, May 17, 2024
Homeಕರಾವಳಿಮಂಗಳೂರು: ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ: 95 ಕೆಜಿ ದನದ ಮಾಂಸ ವಶ

ಮಂಗಳೂರು: ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ: 95 ಕೆಜಿ ದನದ ಮಾಂಸ ವಶ

spot_img
- Advertisement -
- Advertisement -

ಮಂಗಳೂರು: ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ ನಡೆಸಿದ ಮಂಗಳೂರು ಗ್ರಾಮಾಂತರ ಪೊಲೀಸರು ದಾಳಿ ಮಾಡಿ 95 ಕೆಜಿ ಮಾಂಸ, ಮಾಂಸ ಸೀಳುವ ಯಂತ್ರ, ತೂಕದ ಉಪಕರಣಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಅರ್ಕುಳ ಗ್ರಾಮದಲ್ಲಿ ನಡೆದಿದೆ. ಆರೋಪಿ ಬಶಿತ್ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಕುಳ ಕೋಟೆಯಲ್ಲಿರುವ ಬಿ ಕೆ ಖಾಲಿದ್ ಎಂಬುವರಿಗೆ ಸೇರಿದ ಶೆಡ್‌ನಲ್ಲಿ ಬಾಶಿತ್ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಜಾನುವಾರುಗಳನ್ನು ಅಕ್ರಮವಾಗಿ ಕಡಿದು ಮಾಂಸವನ್ನು ಶೆಡ್‌ನಿಂದ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!