ಮಂಗಳೂರು: ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ ವಿಚಾರಕ್ಕೆ ಸಂಬಂಧಿಸಿದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಕೈಗೆತ್ತಿಕೊಂಡಿದ್ದು ಮಂಗಳೂರಿನಲ್ಲಿ ಎನ್‌ಐಎ ತನಿಖೆ ಮುಂದುವರೆಸಿದೆ. ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ವಿಚಾರಣೆ ನಡೆಸುತ್ತಿದೆ.
ಬಂಧಿತರೆಲ್ಲರೂ ಶ್ರೀಲಂಕಾದ ತಮಿಳರಾಗಿದ್ದು ಇವರಲ್ಲಿ ಸಿಂಹಳೀಯರು ಯಾರು ಇಲ್ಲ, ಇವರು ಎಲ್ ಟಿ ಟಿ ಇ ಯ ಪ್ರಭಾವ ಇದ್ದ ಉತ್ತರ ಶ್ರೀಲಂಕಾದ ಪ್ರದೇಶದಲ್ಲಿದ್ದವರು. ಹಾಗಾಗಿ ರಾಷ್ಟ್ರೀಯ ಭದ್ರತೆಯ ಹಿನ್ನಲೆಯಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಎನ್‌ಐಎ ಮಂಗಳೂರು ಪೊಲೀಸರಿಂದ ಎಫ್‌ಐಆರ್ ಪ್ರತಿ ಮತ್ತು ಸಮಗ್ರ ಮಾಹಿತಿ ಪಡೆದಿದ್ದಾರೆ. ಮಂಗಳೂರು ಪೊಲೀಸರು ಜೂ.10ರಂದು 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು.ಕೆನಡಾದಲ್ಲಿ ಉದ್ಯೋಗದ ಆಮಿಷ ಒಡ್ಡಿ 38 ಮಂದಿಯನ್ನ ಶ್ರೀಲಂಕಾದಿಂದ ಕರೆ ತರಲಾಗಿತ್ತು. ತಮಿಳುನಾಡಿನ ತೂತುಕಡಿಗೆ ಬಂದಿದ್ದ ಇವರು ಅಲ್ಲಿನ ಚುನಾವಣೆ ಹಿನ್ನೆಲೆ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಲ್ಲಿ ಅಕ್ರಮವಾಗಿ ವಾಸವಿದ್ದ 38 ಜನರನ್ನು ಬಂಧಿಸಲಾಗಿತ್ತು.ಸದ್ಯ ಇವರ ವಿರುದ್ದ ತಮಿಳುನಾಡಿನಲ್ಲೂ ಪ್ರಕರಣ ದಾಖಲಾಗಿದೆ. ಜೊತೆಗೆ ಎನ್‌ಐಎ ಕೂಡ ಈ ಬಗ್ಗೆ ತನಿಖೆ ಚುರುಕುಗೊಳಿಸಿದೆ.
ಮಂಗಳೂರು: ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ; ತನಿಖೆ ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳ
- Advertisement -
- Advertisement -
- Advertisement -
