ಬೆಳ್ತಂಗಡಿ : ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ‘ಅಭ್ಯಾಸ್’ ಎಂಬ ಹೆಸರಿನ CET,NEET, JEE ಕೋಚಿಂಗ್ ಸೆಂಟರ್ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ.

ಬೆಳ್ತಂಗಡಿ ನಗರದ ಲೋಬೋ ಟವರ್ಸ್ ಎಂಬ ಹೆಸರಿನ ವಾಣಿಜ್ಯ ಕಟ್ಟಡದಲ್ಲಿ ಪಿ.ಯು.ಬೋರ್ಡ್ ಮತ್ತು ಬೆಳ್ತಂಗಡಿ ನಗರ ಪಂಚಾಯತ್ ಗಳ ಅನುಮತಿ(ಲೈಸೆನ್ಸ್) ಇಲ್ಲದೆ ಅಕ್ರಮವಾಗಿ ಪಿ.ಯು ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಿದ್ದಾರೆ. ಕೋಚಿಂಗ್ ಸೆಂಟರ್ ನಡೆಸಬೇಕಾದ್ರೆ ಪಿ.ಯು.ಬೋರ್ಡ್ ಅನುಮತಿ ಕಡ್ಡಾಯವಾಗಿರುತ್ತದೆ. ಅದಲ್ಲದೆ ಕಟ್ಟಡ ಕೋಣೆಗೆ ಸ್ಥಳೀಯ ಪಂಚಾಯತ್ ನಿಂದ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆದ ಬಳಿಕ ಕಾರ್ಯಾಚರಿಸಬೇಕಾಗುತ್ತದೆ. ಆದ್ರೆ ‘ಲೋಬೋ ಟವರ್ಸ್’ ನ ಕಟ್ಟಡದ ಮೂರನೇ ಮಹಡಿಯಲ್ಲಿರುವ “ಅಭ್ಯಾಸ್ ” ‘ದಿ ಅಕಾಡೆಮಿ ಆಫ್ ಲರ್ನಿಂಗ್’ ಎಂಬ ಹೆಸರಿನಲ್ಲಿ CET, NEET, JEE ಕೋಚಿಂಗ್ ಸೆಂಟರ್ ಹಲವು ವರ್ಷಗಳಿಂದ ತೆರೆದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ವಿದ್ಯಾವಂತ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿರುವ ಈ ಅಕ್ರಮ ಕೋಚಿಂಗ್ ಸೆಂಟರ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ವಿದ್ಯಾರ್ಥಿಗಳ ಪೋಷಕರಿಗೆ ಅಕ್ರಮ ಅಭ್ಯಾಸ್ ಕೋಚಿಂಗ್ ಸೆಂಟರ್ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ದೂರು ನೀಡಬೇಕಾದರೆ ಮಂಗಳೂರು ಪಿಯು ಬೋರ್ಡ್ ಡಿ.ಡಿ ರಾಜೇಶ್ವರಿ ಅವರನ್ನು ಸಂಪರ್ಕಿಸಬಹುದಾಗಿದೆ.( ಮೊ. 89043 58140 ).
ಈ ‘ಅಭ್ಯಾಸ್’ ಕಾಲೇಜಿಗೆ ಸೇರಿದ ಕೋಚಿಂಗ್ ಸೆಂಟರ್ ಇದಾಗಿದೆ ಎನ್ನಲಾಗಿದೆ.