Friday, June 27, 2025
Homeಕರಾವಳಿಬೆಳ್ತಂಗಡಿ : ಲಾಯಿಲ ಗ್ರಾ.ಪಂ ಪಕ್ಕದಲ್ಲೇ ಅಕ್ರಮ ಕಟ್ಟಡ: ದೂರಿನ ಬೆನ್ನಲ್ಲೇ ಕಟ್ಟಡ ಕಾಮಗಾರಿಗೆ ಬ್ರೇಕ್

ಬೆಳ್ತಂಗಡಿ : ಲಾಯಿಲ ಗ್ರಾ.ಪಂ ಪಕ್ಕದಲ್ಲೇ ಅಕ್ರಮ ಕಟ್ಟಡ: ದೂರಿನ ಬೆನ್ನಲ್ಲೇ ಕಟ್ಟಡ ಕಾಮಗಾರಿಗೆ ಬ್ರೇಕ್

spot_img
- Advertisement -
- Advertisement -

ಬೆಳ್ತಂಗಡಿ : ಲಾಯಿಲ ಗ್ರಾಮದಲ್ಲಿ ವಾಸ್ತವ್ಯದ ಕಟ್ಟಡ ನಿರ್ಮಾಣದ ಪರವಾನಿಗೆ ಪಡೆದು ಕಾನೂನುಗಳನ್ನೂ ಮೀರಿ ಲಾಯಿಲ ಗ್ರಾ.ಪಂ ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ತನಿಖೆ ನಡೆಸಿ ವಾಣಿಜ್ಯ ಉದ್ದೇಶದ ಕಟ್ಟಡದ ಕಾಮಗಾರಿಯನ್ನು ಮುಂದಿನ ಆದೇಶದ ವರೆಗೆ ಸ್ಥಗಿತಗೊಳಿಸುವಂತೆ ಲಾಯಿಲ ಗ್ರಾಮ ಪಂಚಾಯತ್ ಆದೇಶ ನೀಡಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ರಾಘವೇಂದ್ರ ಮಠದ ಸಮೀಪ ಲಾಯಿಲ ಗ್ರಾ.ಪಂ ಸಮೀಪದಲ್ಲಿರುವ ಸ.ನಂ 232/1P4ನಲ್ಲಿ ಲಾಯಿಲದ ಮೊಹಮ್ಮದ್ ರಫೀಕ್ ಎಂಬವರು ನಿರ್ಮಾಣ ಮಾಡುತ್ತಿದ್ದ ಕಟ್ಟಡದ ಕಾಮಗಾರಿಗೆ ಸಮರ್ಪಕವಾದ ಅನುಮತಿಗಳನ್ನು ಪಡೆಯದ ಹಿನ್ನಲೆಯಲ್ಲಿ, ಗ್ರಾಮ ಪಂಚಾಯತ್ ಆಡಳಿತವು ಕಟ್ಟಡ ನಿರ್ಮಾಣಕ್ಕೆ ವಿಧಿಸಿದ್ದ ಶರ್ತಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಲಾಯಿಲ ನಿವಾಸಿ ಅನ್ಸಾರ್ ಎಂಬವರು ದೂರು ನೀಡಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಬಳಿಕ ಕಾಮಗಾರಿ ಸ್ಥಗಿತ ಗೊಳಿಸಿ ಗ್ರಾ.ಪಂ ಆದೇಶ ನೀಡಿದೆ. ಕಟ್ಟಡದ ಕಾಮಗಾರಿಗೆ ಅನುಮತಿ ಪಡೆಯುವ ವೇಳೆ ಕಾರ್ಮಿಕ ಇಲಾಖೆಗೆ ಹಾಗೂ ಗ್ರಾಮ ಪಂಚಾಯತಿಗೆ ಕಟ್ಟಡದ ಸರಿಯಾದ ವಿಸ್ತೀರ್ಣ ವನ್ನು ತೋರಿಸದೆ ತೆರಿಗೆಯಲ್ಲಿ ವಂಚನೆ ಮಾಡಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ. ಮನೆಗೆಂದು ಜಮೀನು ಕನ್ವರ್ಷನ್ ಮಾಡಿ ಮನೆ ನಿರ್ಮಾಣಕ್ಕೆ ಗ್ರಾ.ಪಂ ನಿಂದ ಪರವಾನಿಗೆ ಪಡೆದು ಇದೀಗ ಅಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡವನ್ನು ನಿರ್ಮಿಸುತ್ತಿರುವುದಾಗಿ ಗ್ರಾಮ ಪಂಚಾಯತು ಹಾಗೂ ಕಾರ್ಮಿಕ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಸ್ಪಷ್ಟ ಗೊಂಡಿರುವುದಾಗಿ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ.

ಕಟ್ಟಡದ ಮೂರನೇ ಅಂತಸ್ತಿಗೆ ಗ್ರಾ.ಪಂ ನಿಂದ ಅನುಮತಿ ಪಡೆಯಲಾಗಿಲ್ಲ, 11ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಕ್ಕೆ ಅಗ್ನಿ ಶಾಮಕ ಇಲಾಖೆಯ ಪರವಾನಿಗೆ ಪಡೆಯಬೇಕಾಗಿದೆ ಆದರೆ ಅದನ್ನು ಪಡೆಯಲಾಗಿಲ್ಲ, ಸರಕಾರಕ್ಕೆ ಪಾವತಿಸಬೇಕಾದ ತೆರಿಗೆಗಳನ್ನು ಪಾವತಿ ಮಾಡಿಲ್ಲ, ವಾಣಿಜ್ಯ ಉದ್ದೇಶಕ್ಕಾಗಿನ ಭೂ ಪರಿವರ್ತನೆ ಮಾಡಲಾಗಿಲ್ಲ, ಗ್ರಾ.ಪಂ ನೀಡಿದ್ದ ಶರ್ತಗಳನ್ನು ಉಲ್ಲಂಘಿಸಲಾಗಿದೆ ಎಂದು ಸ್ಥಳ ತನಿಖೆಯ ವೇಳೆ ಕಂಡು ಬಂದಿರುವ ಹಿನ್ನಲೆಯಲ್ಲಿ ಈ ಬಗ್ಗೆ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಕಟ್ಟಡದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗ್ರಾಮ ಪಂಚಾಯತು ಆಡಳಿತ ಆದೇಶ ನೀಡಿದೆ.

- Advertisement -
spot_img

Latest News

error: Content is protected !!