Monday, May 20, 2024
Homeಕರಾವಳಿಬೆಳ್ತಂಗಡಿ : ಎರಡು ಕಡೆ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಪತ್ತೆ ಹಚ್ಚಿದ ಅಬಕಾರಿ ದಳ

ಬೆಳ್ತಂಗಡಿ : ಎರಡು ಕಡೆ ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಪತ್ತೆ ಹಚ್ಚಿದ ಅಬಕಾರಿ ದಳ

spot_img
- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಪೂರ್ವ ತಯಾರಿಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಎರಡು ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಅಬಕಾರಿ ದಳದವರು ಪತ್ತೆ ಹಚ್ಚಿ ಎರಡು ಪ್ರಕರಣ ದಾಖಲಿಸಿಕೊಂಡಿದ್ದು. ಈ ಪ್ರಕರಣದಲ್ಲಿ ಎರಡು ಕಾರು ಮತ್ತು ಮದ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ-1 : ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನೀರಚಿಲುಮೆ ಎಂಬಲ್ಲಿ ಅಬಕಾರಿ ದಳದವರು ಖಚಿತ ಮಾಹಿತಿ ಮೇರೆಗೆ ಎ.10 ರಂದು ವಾಹನ ಸಂಖ್ಯೆ KA-19-M-5493 ಓಮಿನಿ ವಾಹನದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ 8.640 ಲೀಟರ್ ಮದ್ಯವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಓಮಿನಿ ವಾಹನದಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಧರ್ಮಸ್ಥಳ ಗ್ರಾಮದ ಫಕೀರ ಪೂಜಾರಿ ಮಗನಾದ ಶಶಿಧರ್ ಪರಾರಿಯಾಗಿದ್ದು. ಓಮಿನಿ ವಾಹನ , ಮದ್ಯ ವಶಪಡಿಸಿಕೊಂಡಿದ್ದು.ಇದರ ಒಟ್ಟು ಮೌಲ್ಯ 1,53,360 ರೂಪಾಯಿ ಅಗಿದ್ದು. ಈ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ-2:ಬೆಳ್ತಂಗಡಿ ಕಸಬದ ಕೆಲ್ಲಗುತ್ತು ಎಂಬಲ್ಲಿ ಬೆಳ್ತಂಗಡಿ ಅಬಕಾರಿ ದಳದವರು ಎ.10 ರಂದು ಖಚಿತ ಮಾಹಿತಿ ಮೇರೆಗೆ ವಾಹನ ಸಂಖ್ಯೆ KA-19-MD-4179 ಮಾರುತಿ ರಿಟ್ಜ್ ಕಾರಿನಲ್ಲಿ ಅಕ್ರಮವಾಗಿ 17.280 ಲೀಟರ್ ಮದ್ಯ ಸಾಗಾಟವನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಕಾರಿನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಗೋಪಣ್ಣ ಪೂಜಾರಿ ಮಗನಾದ ರತ್ನಾಕರ ಪರಾರಿಯಾಗಿದ್ದು. ಕಾರು ಮತ್ತು ಮದ್ಯವನ್ನುವಶಪಡಿಸಿಕೊಂಡಿದ್ದು‌. ಇದರ ಒಟ್ಟು ಮೌಲ್ಯ 3,31,720 ರೂಪಾಯಿ ಅಗಿದ್ದು. ಈ ಬಗ್ಗೆ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಅಕ್ರಮ ಮದ್ಯ ಸಾಗಾಟ ಪ್ರಕರಣವನ್ನು ಬೆಳ್ತಂಗಡಿ ಅಬಕಾರಿ ನಿರೀಕ್ಷಕರಾದ ನವೀನ್ ಕುಮಾರ್ , ಅಬಕಾರಿ ಉಪನಿರೀಕ್ಷಕ ಶ್ರೀ ಸಯ್ಯದ್ ಶಬೀರ್ ಹಾಗೂ ಸಿಬ್ಬಂದಿಗಳಾದ ಶವಶಂಕ್ರಪ್ಪ , ಬೋಜ.ಕೆ , ವಿನೊಯ್.ಸಿ.ಜೆ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!