Sunday, May 5, 2024
Homeತಾಜಾ ಸುದ್ದಿಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ಮುಸ್ಲಿಂ ವ್ಯಕ್ತಿಗೆ ಸಿಎಂ ಪಟ್ಟ, ಮಹಿಳೆಗೆ ಡಿಸಿಎಂ ಹುದ್ದೆ;ಕೋಲಾರದಲ್ಲಿ ಮಾಜಿ...

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ಮುಸ್ಲಿಂ ವ್ಯಕ್ತಿಗೆ ಸಿಎಂ ಪಟ್ಟ, ಮಹಿಳೆಗೆ ಡಿಸಿಎಂ ಹುದ್ದೆ;ಕೋಲಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ

spot_img
- Advertisement -
- Advertisement -

ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆದ್ದರೆ ಮುಸ್ಲಿಂ ವ್ಯಕ್ತಿಗೆ ಸಿಎಂ ಪಟ್ಟ ನೀಡಲಾಗುವುದು ಹಾಗೂ ಮಹಿಳೆಗೆ ಡಿಸಿಎಂ ಹುದ್ದೆ ಕೊಡಲಾಗುವುದು ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

 ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದವರಿಗೆ ಸಿಎಂ ಸ್ಥಾನ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಕೋಲಾರ ತಾಲೂಕಿನ ಕ್ಯಾಲನೂರಿನ ಗ್ರಾಮ ವಾಸ್ತವ್ಯದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಮಹಿಳೆಯರ ಪ್ರಾಮಾಣಿಕ ಅಭಿವೃದ್ಧಿಗೆ ಜೆಡಿಎಸ್ ಬದ್ಧವಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದ್ರೆ ಮಹಿಳೆಯರನ್ನ ಡಿಸಿಎಂ ಮಾಡುಲು ಸಿದ್ದವಿದ್ದೇವೆ ಎಂದು ಹೇಳಿದ್ದಾರೆ.ಅವಕಾಶ ಬಂದರೇ ಮುಸ್ಲಿಂ ಸಮುದಾಯದವರು ಸಿಎಂ ಆಗಬಹುದು.ಅವರು ಯಾಕೆ ಆಗಬಾರದು?ನಿನ್ನೆ ಶಾಲೆಗೆ ಹೋಗುವ ಮಕ್ಕಳು ಬಂದು ನೀವು ಸಿಎಂ ಆಗ್ಬೇಕು ಎಂದರು. ಆರತಿ ಮಾಡಿದಾಗ ದಕ್ಷಿಣೆ ಕೊಟ್ಟಾಗ ದುಡ್ಡು ಬೇಡ ಒಳ್ಳೆ ಶಾಲೆ ಮಾಡಿ ಅಂತ ಮಕ್ಕಳು ಹೇಳಿದ್ರು.ಮುಂದೆ ದುಡ್ಡು ಕೊಟ್ಟು ಮತ ಪಡೆಯೋದನ್ನ ಜನ ನಿಷೇಧ ಮಾಡಿದ್ದಾರೆ ಎಂದಿದ್ದಾರೆ.

- Advertisement -
spot_img

Latest News

error: Content is protected !!