Wednesday, April 24, 2024
Homeಕ್ರೀಡೆದಿಢೀರ್ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟ ಒಲಿಂಪಿಕ್ಸ್ ತಾರೆ ಪಿವಿ ಸಿಂಧು!

ದಿಢೀರ್ ನಿವೃತ್ತಿ ಘೋಷಿಸಿ ಶಾಕ್ ಕೊಟ್ಟ ಒಲಿಂಪಿಕ್ಸ್ ತಾರೆ ಪಿವಿ ಸಿಂಧು!

spot_img
- Advertisement -
- Advertisement -

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆಲುವ ಮೂಲಕ ಭಾರತಕ್ಕೆ ಆಶಾಕಿರಣವಾಗಿದ್ದ ಸಿಂಧು ಅವರು ದಿಢೀರ್ ಅಂತಾ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ನಿವೃತ್ತಿ ಬಗ್ಗೆ ಟ್ವೀಟ್ ನಲ್ಲಿ ಸಿಂಧು ಘೋಷಿಸಿದ್ದಾರೆ. ಟ್ವೀಟ್ ನಲ್ಲಿ ಡೆನ್ಮಾರ್ಕ್ ಓಪನ್ ತನ್ನ ಕೊನೆಯ ಟೂರ್ನಿ, ನಾನು ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದಾರೆ.

ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇವರು, ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿರುವ ಸ್ವಸಹಾಯ ಸಂಸ್ಥೆಯಾದ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನ ಭಾಗವಾಗಿದ್ದಾರೆ.

10 ಆಗಸ್ಟ್ 2013 ರಂದು ಇವರು ಚೀನಾ ದಲ್ಲಿ ಜರುಗಿದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನ ಸಿಂಗಲ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ (ಪ್ರಕಾಶ್ ಪಡುಕೋಣೆ 1984 ರಲ್ಲಿ ಕಂಚು ಗೆದ್ದಿದ್ದಾರೆ. ಅನಂತರ ಭಾರತದ ಮೊದಲ ಸಿಂಗಲ್ಸ್ ಪದಕ) . ಸೆಪ್ಟೆಂಬರ್ 21 , 2012 ರಂದು ಬಿಡುಗಡೆ ಮಾಡಲಾದ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಶ್ರೇಯಾಂಕಗಳಲ್ಲಿ ಮೊದಲ 20ರೊಳಗಿನ ಶ್ರೇಣಿಯಲ್ಲಿದ್ದರು. ಬಿಡಬ್ಲ್ಯೂಎಫ್ ಜೂನಿಯರ್ ಶ್ರೇಯಾಂಕಗಳಲ್ಲಿ 3 ನೇ ಸ್ಥಾನದಲ್ಲಿದ್ದಾರೆ.

- Advertisement -
spot_img

Latest News

error: Content is protected !!