Saturday, May 18, 2024
Homeತಾಜಾ ಸುದ್ದಿಮಾದಕ ನಟಿ ಶಕೀಲಾ ಜೀವನಚರಿತ್ರೆಯ ಹಕ್ಕು ನನ್ನ ಬಳಿ ಇದೆ: ಇಂದ್ರಜಿತ್ ಲಂಕೇಶ್

ಮಾದಕ ನಟಿ ಶಕೀಲಾ ಜೀವನಚರಿತ್ರೆಯ ಹಕ್ಕು ನನ್ನ ಬಳಿ ಇದೆ: ಇಂದ್ರಜಿತ್ ಲಂಕೇಶ್

spot_img
- Advertisement -
- Advertisement -

ಬೆಂಗಳೂರು: ನಟಿ ಶಕೀಲಾ ಎಂದರೆ ಕೆಲವರಿಗೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಗುತ್ತದೆ. ಇನ್ನೂ ಕೆಲವರಿಗೆ ಹಳೆಯ ಮಧುರ ನೆನಪುಗಳು ಬರುತ್ತವೆ. ಇದೀಗ ಶಕೀಲಾ ಜೀವನ ಚರಿತ್ರೆ ಆಧಾರಿತ ಸುಗೇಶ್ ನಿರ್ದೇಶನದ ‘ಶಕೀಲಾ’ ಮಲೇಯಾಳಂ ಚಿತ್ರದ ಟೀಸರ್ ಜೂನ್ 28 ರಂದು ಬಿಡುಗಡೆಯಾಗಿದೆ.

ಈ ಟೀಸರ್ ನಲ್ಲಿ ನಟಿ ಸರಾಯು ಮೋಹನ್ ರನ್ನು ಕಂಡು ಇಂದ್ರಜಿತ್ ಲಂಕೇಶ್ ನಿರ್ದೇಶನ ಮತ್ತು ರಿಚಾ ಚಡ್ಡಾ ನಟನೆಯ ಸಿನಿಮಾ ಏನಾಯಿತು ಎಂಬುದು ಸಿನಿ ರಸಿಕರನ್ನು ಕಾಡುತ್ತಿದೆ.

ರಿಚಾ ಚಡ್ಡಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಶಕೀಲಾ ಚೊಚ್ಚಲ ಬಾಲಿವುಡ್ ಚಿತ್ರವನ್ನು ಇಂದ್ರಜಿತ್ ನಿರ್ದೇಶಿಸಿದ್ದು, ಆ ಚಿತ್ರ ಬಿಡುಗಡೆಯಾಗಬೇಕಿದೆ.

ಟೀಸರ್ ಬಿಡುಗಡೆಯಾದ ಬಳಿಕ ಸಾಕಷ್ಟು ಫೋನ್ ಕರೆ ಹಾಗೂ ಸಂದೇಶಗಳು ಬಂದಿದ್ದು, ಅದೊಂದು ಕಿರು ಚಿತ್ರ ಎಂಬುದನ್ನು ತಿಳಿದಿದ್ದೇನೆ. ಅದು ಶಕೀಲಾ ಜೀವನಾಧಾರಿತ ಚಿತ್ರವಲ್ಲಾ, ಆದಾಗ್ಯೂ,ಶಕೀಲಾ ಎಂಬ ಹೆಸರಿಟ್ಟಿರುವುದರಿಂದ ಟೀಸರ್ ಸಾಕಷ್ಟು ವೈರಲ್ ಆಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಶಕೀಲಾ ಬಯೋಫಿಕ್ ಹಕ್ಕನ್ನು ನಾನು ಪಡೆದುಕೊಂಡಿದ್ದು,ಚಿತ್ರವನ್ನು ಪೂರ್ಣಗೊಳಿಸಿದ್ದೇನೆ. ಅದೊಂದು ಮಹಿಳಾ ಕೇಂದ್ರಿತ ಚಿತ್ರ. ಉತ್ತಮ ಸಂದೇಶವಿದೆ. ಸೆನ್ಸರ್ ಕೂಡಾ ಮುಗಿದಿದ್ದು, ಚಿತ್ರ ಬಿಡುಗಡೆಯಷ್ಟೇ ಬಾಕಿಯಿದೆ ಎಂದು ಅವರು ತಿಳಿಸಿದ್ದಾರೆ.

ಹಿಂದಿಯಲ್ಲಿ ಚಿತ್ರ ಮಾಡಿದ್ದರೂ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುವುದು, ಮುಂಬೈಯ ಬಹುರಾಷ್ಟ್ರೀಯ ಕಂಪನಿಯೊಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಡಬ್ಬಿಂಗ್ ಮಾಡುವ ಹಕ್ಕು ಪಡೆದುಕೊಂಡಿದೆ ಎಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!