Friday, June 5, 2026
Homeಕರಾವಳಿಬೆಳ್ತಂಗಡಿ; ಗಂಡ ಪರ ಸ್ತ್ರೀಯೊಂದಿಗೆ ನಾಪತ್ತೆಯಾಗಿದ್ದಾರೆಂದು ಪತ್ನಿಯಿಂದ ದೂರು

ಬೆಳ್ತಂಗಡಿ; ಗಂಡ ಪರ ಸ್ತ್ರೀಯೊಂದಿಗೆ ನಾಪತ್ತೆಯಾಗಿದ್ದಾರೆಂದು ಪತ್ನಿಯಿಂದ ದೂರು

- Advertisement -
- Advertisement -

ಬೆಳ್ತಂಗಡಿ; ಗಂಡ ಪರ ಸ್ತ್ರೀಯೊಂದಿಗೆ ನಾಪತ್ತೆಯಾಗಿದ್ದಾರೆಂದು ಪತ್ನಿಯೊಬ್ಬರು ದೂರು ನೀಡಿರುವ ಘಟನೆ ಲಾಯಿಲ ಗ್ರಾಮದ ಕಕ್ಕೇನ ಎಂಬಲ್ಲಿ ನಡೆದಿದೆ.

ಲಾಯಿಲ ಗ್ರಾಮದ ಕಕ್ಕೇನ ಎಂಬಲ್ಲಿಯ ನಿವಾಸಿ  ಮರಿಯಮ್ಮ  ಎಂಬವರು ಈ ಬಗ್ಗೆ ದೂರು ನೀಡಿದ್ದು ನನ್ನ ಗಂಡ  ಗಂಡ   ಫಯಾಜ್‌ ಹಾಗೂ ಲಾಯಿಲ ಕಕ್ಕೇನದ ಹಮೀದ್ ರವರ 2ನೇ ಪತ್ನಿ ಜಮೀಳಾರವರು ಅನ್ಯೋನ್ಯತೆಯಿಂದ ಇದ್ದರು.  ದಿನಾಂಕ: 22/04/2024 ರಂದು ಬೆಳ್ಳಿಗ್ಗೆ  6.30 ಗಂಟೆಗೆ ಮನೆಯಿಂದ ಗಂಡ ಫಯಾಜ್  ರಿಕ್ಷಾದಲ್ಲಿ ಬಾಡಿಗೆಗೆ  ಹೋಗಿದ್ದು   ಮಧ್ಯಾಹ್ನ 2.00 ಗಂಟೆಗೆ ಉಜಿರೆ ತರಕಾರಿ ವ್ಯಾಪಾರಿ ಮುಸ್ತಫಾರವರು ನನಗೆ ಕರೆ ಮಾಡಿ ಹಮೀದ್‌ ರವರ ಮಗಳ ಗಂಡ ಸಿನಾನ್‌ ಅಂಗಡಿಗೆ ಬಂದು, ಫಯಾಜ್‌ ಬಗ್ಗೆ ಕೇಳಿದ್ದು,, ಫಯಾಜ್‌ ಈ ದಿನ ದಿನಾಂಕ: 22/04/2024 ರಂದು ಬೆಳ್ಳಿಗ್ಗೆ  ಸುಮಾರು 6.45 ಗಂಟೆಗೆ ಮಾವ ಹಮೀದ್ ರವರ ಮನೆ ಬಳಿಗೆ ರಿಕ್ಷಾದಲ್ಲಿ ಬಂದವನು ಅತ್ತೆ ಜಮೀಳಾರವರನ್ನು ಕರೆದುಕೊಂಡು ರಿಕ್ಷಾದಲ್ಲಿ ಹೋಗಿದ್ದಾರೆ. ಬಳಿಕ   ಇಬ್ಬರ  ಮೊಬೈಲ್‌  ಸ್ವೀಚ್‌  ಆಫ್‌  ಆಗಿರುವುದಾಗಿ  ನನ್ನ ಬಳಿ ತಿಳಿಸಿದ್ದು,  ಗಂಡ ಫಯಾಜ್‌   ಹಾಗೂ ಹಮೀದ್ ರವರ  ಪತ್ನಿ ಜಮೀಳಾ ಎಲ್ಲಿಗೂ ಹೋಗಿರಲಿಕ್ಕಿಲ್ಲ ಹತ್ತಿರದಲ್ಲೇ ಇರಬಹುದು, ಬರಬಹುದು ಎಂದು ಈ ತನಕ ಕಾದು ತಡವಾಗಿ ದೂರು ನೀಡುತ್ತಿದ್ದು ಲಾಯಿಲ ಕಕ್ಕೇನದ ಜಮೀಳಾಳ ಜೊತೆಗೆ ಕಾಣೆಯಾಗಿರುವ ಮರಿಯಮ್ಮ ಗಂಡ ಫಯಾಜ್‌  ಹಾಗೂ ಹಮೀದ್ ರವರ  2ನೇ ಪತ್ನಿ  ಜಮೀಳಾಳನ್ನು ಪತ್ತೆ ಹಚ್ಚಿ ಕೊಡಬೇಕಾಗಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!