Friday, June 5, 2026
Homeಕೊಡಗುಕೊಡಗು; ಮಾಜಿ ಗ್ರಾಮ ಪಂಚಾಯತ್ ಸದಸ್ಯೆಯನ್ನು ಗುಂಡಿಕ್ಕಿ ಕೊಂದ ಪತಿ

ಕೊಡಗು; ಮಾಜಿ ಗ್ರಾಮ ಪಂಚಾಯತ್ ಸದಸ್ಯೆಯನ್ನು ಗುಂಡಿಕ್ಕಿ ಕೊಂದ ಪತಿ

- Advertisement -
- Advertisement -

ಕೊಡಗು; ಮಾಜಿ ಗ್ರಾಮ ಪಂಚಾಯತ್ ಸದಸ್ಯೆಯನ್ನು ಗುಂಡಿಕ್ಕಿ ಪತಿ ಕೊಂದ ಘಟನೆ ವಿರಾಜಪೇಟೆ ಹೊರವಲಯದ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ಶಿಲ್ಪಾ ಸೀತಮ್ಮ (40)ಮೃತ ದುರ್ದೈವಿ.

ಈಕೆಯನ್ನು ಆಕೆಯ ಪತಿ ನಾಯಕಂಡ ಬೋಪಣ್ಣ(45)  ಗುಂಡಕ್ಕಿ ಹತ್ಯೆ ಮಾಡಿದ್ದಾರೆ. ನಿನ್ನೆ ರಾತ್ರಿ ಶಿಲ್ಪ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದನ್ನು ಆಕ್ಷೇಪಿಸಿದ ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶಿಲ್ಪ ಸೀತಮ್ಮ 2012 ರಿಂದ 2017 ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೊಲೆ ನಡೆಸಿದ ನಂತರ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಶರಣಾಗಿದ್ದಾನೆ.ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!