- Advertisement -
![]()
- Advertisement -
ಗಂಗಾವತಿ: ಪತ್ನಿಯನ್ನು ಎತ್ತಿಕೊಂಡು ಪತಿ ಕೊಪ್ಪಳ ಜಿಲ್ಲೆಯಲ್ಲಿರುವ ಐತಿಹಾಸಿಕ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ಹತ್ತಿದ್ದಾರೆ.
ಗಂಗಾವತಿ ತಾಲೂಕಿನ ಆಂಜನಾದ್ರಿ ಬೆಟ್ಟದಲ್ಲಿ ಯಲಬುರ್ಗಾ ತಾಲೂಕಿನವರಾಗಿರುವ ಪತಿ ಪತ್ನಿಯನ್ನು ಎತ್ತಿಕೊಂಡು ಬೆಟ್ಟ ಏರಿ ಹರಕೆ ಸಲ್ಲಿಸಿದ್ದಾರೆ.
ಕಡಿದಾಗಿರುವ 575 ಮೆಟ್ಟಿಲುಗಳನ್ನು ಪತ್ನಿಯನ್ನು ಕೈಯಲ್ಲಿ ಎತ್ತಿಕೊಂಡು ವಿಶ್ರಾಂತಿ ಪಡೆಯದೇ ಏರಿದ ಪತಿಯ ಸಾಹಸಕ್ಕೆ ಬೆಟ್ಟ ಏರುತ್ತಿದ್ದ ಉಳಿದ ಭಕ್ತರು ಆಂಜನೇಯನಿಗೆ ಜೈಕಾರ ಹಾಕುವ ಮೂಲಕ ಪ್ರೋತ್ಸಾಹಿಸಿದ್ದಾರೆ.ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದಂಪತಿ ಈ ರೀತಿಯ ವಿಶಿಷ್ಟ ಹರಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
- Advertisement -


