Thursday, October 15, 2026
Homeತಾಜಾ ಸುದ್ದಿರಂಗೇರುತ್ತಿದೆ ಗ್ರಾಮ ಪಂಚಾಯತ್ ಚುನಾವಣೆಯ ಅಖಾಡ: ಮಡಿಕೇರಿಯಲ್ಲಿ ಪತಿ- ಪತ್ನಿಯೇ ಪ್ರತಿಸ್ಪರ್ಧಿಗಳು

ರಂಗೇರುತ್ತಿದೆ ಗ್ರಾಮ ಪಂಚಾಯತ್ ಚುನಾವಣೆಯ ಅಖಾಡ: ಮಡಿಕೇರಿಯಲ್ಲಿ ಪತಿ- ಪತ್ನಿಯೇ ಪ್ರತಿಸ್ಪರ್ಧಿಗಳು

- Advertisement -
- Advertisement -

ಮಡಿಕೇರಿ: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದರಲ್ಲೂ ಕೊಡಗಿನಲ್ಲಿ ಅಚ್ಚರಿಯ ಸ್ಪರ್ಧೆಯೊಂದು ನಡೆಯುತ್ತಿದೆ. ಲೋಕ್ ವಾರ್ ನಲ್ಲಿ ಪತಿ-ಪತ್ನಿಯೇ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ.

ಹೌದು..ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯತ್‌ನ ಎರಡನೇ ವಾರ್ಡ್ ನಲ್ಲಿ ಪರಸ್ಪರ ಗಂಡ- ಹೆಂಡತಿಯೇ ಸ್ಪರ್ಧಿಸುತ್ತಿದ್ದಾರೆ.ಸೋಮವಾರಪೇಟೆ ತಾಲೂಕಿನ ಕಂಬಿಬಾಣೆ ಗ್ರಾಮದ ನಿವಾಸಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಗಂಡನ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ.

ಇದೇ ಡಿ.22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಪತಿ-ಪತ್ನಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು “ಮನೆಯಲ್ಲಿ ಅಷ್ಟೇ ನಾವು ಪತಿ-ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು” ಎಂದಿದ್ದಾರೆ.

ಇನ್ನು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಕಣದಲ್ಲಿದ್ದು, ಜನರು ಮಾತ್ರ ಯಾರನ್ನು ಆಯ್ಕೆ ಮಾಡುತ್ತಾರೋ ಫಲಿತಾಂಶ ಬಂದ ನಂತರವೇ ಗೊತ್ತಾಗಬೇಕಿದೆ.

- Advertisement -

Latest News

error: Content is protected !!