Thursday, October 22, 2026
Homeಕರಾವಳಿಉಡುಪಿಖಾಸಗಿ ಅಪಾರ್ಟ್‌ಮೆಂಟ್ ಸಮೀಪದ ಪೊದೆಯಲ್ಲಿ ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆ

ಖಾಸಗಿ ಅಪಾರ್ಟ್‌ಮೆಂಟ್ ಸಮೀಪದ ಪೊದೆಯಲ್ಲಿ ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆ

- Advertisement -
- Advertisement -

ಉಡುಪಿ: ಅನಂತನಗರದ 3ನೇ ಕ್ರಾಸ್‌ನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ಸಮೀಪದ ಪೊದೆಯಲ್ಲಿ ಬುಧವಾರದಂದು ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಪಾರ್ಟ್‌ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ಕಾರ್ಮಿಕರು ಹುಲ್ಲು ಮತ್ತು ಪೊದೆಗಳನ್ನು ತೆರವುಗೊಳಿಸುತ್ತಿದ್ದಾಗ ತಲೆಬುರುಡೆ ಹಾಗೂ ಹಲವು ಮೂಳೆಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಸ್ಥಳೀಯರು ಸಂಜೆ 4 ಗಂಟೆ ಸುಮಾರಿಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಭಾಗಶಃ ತಲೆಬುರುಡೆ, ಕೆಳದವಡೆಯ ಮೂಳೆ, ಆರು ಪಕ್ಕೆಲುಬುಗಳು, ಎರಡು ತೋಳಿನ ಮೂಳೆಗಳು, ತೊಡೆಯ ಮೂಳೆ, ಕುತ್ತಿಗೆಯ ಕಶೇರುಖಂಡ ಸೇರಿದಂತೆ ಹಲವು ಮೂಳೆಗಳು ಪತ್ತೆಯಾಗಿವೆ. ಅವಶೇಷಗಳು ಸುಮಾರು ಒಂದು ವರ್ಷ ಹಳೆಯದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಪೊಲೀಸರು ಮೂಳೆಗಳನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಅವಶೇಷಗಳು ಅಲ್ಲಿಗೆ ಹೇಗೆ ಬಂದವು ಮತ್ತು ಇದರ ಹಿಂದೆ ಯಾವುದಾದರೂ ಅಪರಾಧ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಈ ಸಂಬಂಧ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

- Advertisement -

Latest News

error: Content is protected !!