Thursday, October 22, 2026
Homeಕರಾವಳಿಮಂಗಳೂರುಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಅಪಘಾತ: ಬೈಕ್ ವಿದ್ಯುತ್ ಕಂಬದ ಸ್ಟೇ ವೈರ್‌ಗೆ ಢಿಕ್ಕಿಯಾಗಿ ಸವಾರ ದಾರುಣ ಸಾವು

ಬೆಳ್ಳಾರೆ-ಸವಣೂರು ರಸ್ತೆಯಲ್ಲಿ ಅಪಘಾತ: ಬೈಕ್ ವಿದ್ಯುತ್ ಕಂಬದ ಸ್ಟೇ ವೈರ್‌ಗೆ ಢಿಕ್ಕಿಯಾಗಿ ಸವಾರ ದಾರುಣ ಸಾವು

- Advertisement -
- Advertisement -

ಪುತ್ತೂರು: ಬೆಳ್ಳಾರೆ–ಸವಣೂರು ರಸ್ತೆಯ ಕನ್ನಡಕುಮೇರಿ ಎಂಬಲ್ಲಿ ಅಕ್ಟೋಬರ್ 20ರ ರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಾಯಗೊಂಡಿದ್ದಾರೆ. ಕುದ್ಮಾರು ನಿವಾಸಿ ಧನಂಜಯ ಮೃತ ದುರ್ದೈವಿ.

ಧನಂಜಯ ಅವರು ತಮ್ಮ ಸ್ನೇಹಿತ ರೋಷನ್ ಅವರನ್ನು ಸಹಸವಾರನಾಗಿ ಕೂರಿಸಿಕೊಂಡು ಕೆಎ 19 ಎಚ್‌ಕೆ 0323 ನೋಂದಣಿಯ ಮೋಟಾರ್ ಸೈಕಲ್‌ನಲ್ಲಿ ಬೆಳ್ಳಾರೆ–ಸವಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಕನ್ನಡಕುಮೇರಿ ಬಳಿ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇ ವೈರ್‌ಗೆ ತೀವ್ರವಾಗಿ ಢಿಕ್ಕಿ ಹೊಡೆದಿದೆ.

ಅಪಘಾತದ ಭೀಕರತೆಗೆ ಬೈಕ್ ಸವಾರ ಧನಂಜಯ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಸಹಸವಾರ ರೋಷನ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 61/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125(ಎ) ಹಾಗೂ 106ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!