Saturday, June 6, 2026
Homeಕರಾವಳಿಅಕ್ರಮ ದನ ಸಾಗಾಟದ ಬೃಹತ್ ಜಾಲ- ಯಶಸ್ವಿಯಾಗಿ ಭೇದಿಸಿದ ಪುಂಜಾಲಕಟ್ಟೆ ಪೊಲೀಸರು!…

ಅಕ್ರಮ ದನ ಸಾಗಾಟದ ಬೃಹತ್ ಜಾಲ- ಯಶಸ್ವಿಯಾಗಿ ಭೇದಿಸಿದ ಪುಂಜಾಲಕಟ್ಟೆ ಪೊಲೀಸರು!…

- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಸಿ‌.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಬಗ್ಗೆ ಭಜರಂಗದಳ ನೀಡಿದ ಮಾಹಿತಿ ಮೇರೆಗೆ ಬೃಹತ್ ಜಾಲವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಸೌಮ್ಯ ಮತ್ತು ತಂಡ ಇಂದು ಎನ್.ಸಿ.ರೋಡಿನಲ್ಲಿ ಕಾರ್ಯಾಚರಣೆ ಮಾಡಿ ಭೇದಿಸುವಲ್ಲಿ ಯಶ್ವಸ್ಬಿಯಾಗಿದ್ದಾರೆ.

ದಾಳಿ ವೇಳೆ ಒಂದು ಸ್ಕಾರ್ಪಿಯೋ, ಒಂದು ಮಿನಿ ಟೆಂಪೊ, ಒಂದು ಓಮಿನಿ, ಎರಡು ಸ್ಕೂಟರ್ ವಾಹನ ವಶಕ್ಕೆ ಪಡೆಯಲಾಗಿದ್ದು, ವಾಹನದಲ್ಲಿದ್ದ 7 ದನ ,9 ಕರುಗಳನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಆರೋಪಿ ಎನ್.ಸಿ.ರೋಡಿನ ರಹೀಲ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ವಾಹನದಲ್ಲಿದ್ದ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ‌. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!