Saturday, May 4, 2024
Homeಕರಾವಳಿಉಡುಪಿಮಲ್ಪೆಯಲ್ಲಿ ಬಲೆಗೆ ಬಿದ್ದ ಭಾರೀ ಗಾತ್ರದ ಕಾರ್ಗಿಲ್ ಮೀನು

ಮಲ್ಪೆಯಲ್ಲಿ ಬಲೆಗೆ ಬಿದ್ದ ಭಾರೀ ಗಾತ್ರದ ಕಾರ್ಗಿಲ್ ಮೀನು

spot_img
- Advertisement -
- Advertisement -

ಮಲ್ಪೆ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟಿನ ಬಲೆಗೆ ಬೃಹತ್ ಗಾತ್ರದ ಕಾರ್ಗಿಲ್ ಮೀನು ಬಿದ್ದಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಯಕ್ಷೇಶ್ವರೀ ಕೃಪಾ ಆಳಸಮುದ್ರ ಬೋಟಿನಲ್ಲಿ ಮೀನು ಇಳಿಸುವಾಗ ಸುಮಾರು 2 ಕೆ.ಜಿ. ತೂಕದ ಕಾರ್ಗಿಲ್ ಮೀನು ದೊರಕಿದೆ. ಸಾಮಾನ್ಯವಾಗಿ ಕಾರ್ಗಿಲ್ ಮೀನು ಹೆಚ್ಚೆಂದರೆ 250 ಗ್ರಾಂನ ತೂಗುತ್ತದೆ. ಆದರೆ ಇಷ್ಟು ದೊಡ್ಡ ಮೀನು ಕಂಡು ಬರುವುದು ಬಲು ಅಪರೂಪ ಎಂದು ಮೀನುಗಾರ ಮಧುಚೇತನ್ ಕುಂದರ್ ತಿಳಿಸಿದ್ದಾರೆ.

ಈ ಮೀನಿನ ಸಾಮಾನ್ಯ ಹೆಸರು ರೆಡ್‌ಟೂತೆಡ್ ಟ್ರಿಗ್ಗರ್‌ಫಿಶ್, ಓಡೋನಸ್ ನಿಗರ್ ಇದರ ವೈಜ್ಞಾನಿಕ ಹೆಸರು. ಬಲಿಸ್ಟಿಡೆಗೆ ಸೇರಿದ ಈ ಮೀನು ಗಳಲ್ಲಿ ಸುಮಾರು 80 ಜಾತಿಗಳಿವೆ. ಇದು ಸೈನಿಕ ಸಮವಸ್ತ್ರ ಮಾದರಿಯ ಬಣ್ಣ ಹೊಂದಿರುವುದರಿಂದ ಕರ್ನಾಟಕ ಕರಾವಳಿಯಲ್ಲಿ ಇದನ್ನು ಕಾರ್ಗಿಲ್ ಎಂಬುದಾಗಿ ಕರೆಯುತ್ತಾರೆ.

- Advertisement -
spot_img

Latest News

error: Content is protected !!