Saturday, April 20, 2024
Homeತಾಜಾ ಸುದ್ದಿಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿನ ಬೆಲೆ ಭಾರೀ ಹೆಚ್ಚಳ : ನನ್ನ ಬಟ್ಟೆ ಮಾರಿಯಾದ್ರೂ ಅಗ್ಗದ ದರದಲ್ಲಿ...

ಪಾಕಿಸ್ತಾನದಲ್ಲಿ ಗೋಧಿ ಹಿಟ್ಟಿನ ಬೆಲೆ ಭಾರೀ ಹೆಚ್ಚಳ : ನನ್ನ ಬಟ್ಟೆ ಮಾರಿಯಾದ್ರೂ ಅಗ್ಗದ ದರದಲ್ಲಿ ಗೋಧಿ ಹಿಟ್ಟು ಕೊಡ್ತೀನಿ ಎಂದ ಪಾಕ್‌ ಪ್ರಧಾನಿʼ

spot_img
- Advertisement -
- Advertisement -

ಇಸ್ಲಾಮಾಬಾದ್‌: ಮುಂದಿನ 24 ಗಂಟೆಗಳಲ್ಲಿ 10 ಕೆಜಿ ಗೋಧಿ ಹಿಟ್ಟಿನ ಬೆಲೆಯನ್ನು 400 ರೂ.ಗೆ ಇಳಿಸದಿದ್ದರೆ ತಮ್ಮ ಬಟ್ಟೆಗಳನ್ನಾದರೂ ಮಾರಿ ಜನರಿಗೆ ಅಗ್ಗದ ದರದಲ್ಲಿ ಹಿಟ್ಟು ಒದಗಿಸುತ್ತೇನೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಈ ಮೂಲಕ ಖೈಬರ್‌ ಪಖ್ತುನ್ಕವಾ ಪ್ರಾಂತ್ಯದ ಮುಖ್ಯಮಂತ್ರಿ ಮಹಮೂದ್‌ ಖಾನ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಥಕಾರ ಕ್ರೀಡಾಂಗಣದಲ್ಲಿ ನಿನ್ನೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶೆಹಬಾಜ್‌ ಷರೀಫ್‌, ನಾನು ಮತ್ತೆ ಹೇಳುತ್ತಿದ್ದೇನೆ. ಬೇಕಿದ್ದರೆ ನನ್ನ ಬಟ್ಟೆಗಳನ್ನು ಮಾರಾಟ ಮಾಡಿಯಾದರೂ ಜನಕ್ಕೆ ಅಗ್ಗದ ದರದಲ್ಲಿ ಗೋಧಿ ಹಿಟ್ಟನ್ನು ಒದಗಿಸುತ್ತೇನೆ ಎಂದು ಹೇಳಿದ್ದಾರೆ. ಈ ಭಾಷಣ ರಾಜಕೀಯವಾಗಿಯೂ ಗಮನ ಸೆಳೆದಿದ್ದು, ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ವಿರುದ್ಧ ಷರೀಫ್‌ ಕಿಡಿಕಾರಿದ್ದಾರೆ.

ಇಮ್ರಾನ್‌ ಖಾನ್‌ ದೇಶಕ್ಕೆ ಅತ್ಯಧಿಕ ಹಣದುಬ್ಬರ ಮತ್ತು ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹರಿಹಾಯ್ದ ಷರೀಫ್‌, ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಐದು ಮಿಲಿಯನ್ ಮನೆಗಳು ಮತ್ತು 10 ಮಿಲಿಯನ್ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದರು. ಆದರೆ, ಅವುಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದಲ್ಲದೇ, ದೇಶವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶವನ್ನು ಸಮೃದ್ಧಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಇಡಲು ನಾನು ನನ್ನ ಪ್ರಾಣವನ್ನು ತ್ಯಜಿಸಲು ಕೂಡ ಸಿದ್ಧ ಎಂದು ನಿಮ್ಮ ಮುಂದೆ ಗಂಭೀರವಾಗಿ ಘೋಷಿಸುತ್ತೇನೆ ಎಂದು ಶೆಹಬಾಜ್‌ ಹೇಳಿದ್ದಾರೆಂದು ಅಲ್ಲಿನ ಡಾನ್‌ ಪತ್ರಿಕೆ ವರದಿ ಮಾಡಿದೆ.

- Advertisement -
spot_img

Latest News

error: Content is protected !!