Friday, May 3, 2024
Homeತಾಜಾ ಸುದ್ದಿಬ್ಯಾಚುಲರ್ಸ್ ಗಾಗಿ ಜಟ್ ಪಟ್ ಚಿಕನ್ ಮಸಾಲ

ಬ್ಯಾಚುಲರ್ಸ್ ಗಾಗಿ ಜಟ್ ಪಟ್ ಚಿಕನ್ ಮಸಾಲ

spot_img
- Advertisement -
- Advertisement -

ನ್ಯೂಸ್ ಡೆಸ್ಕ್ : ವಾರದಲ್ಲೊಮ್ಮೆ ಚಿಕನ್ ತಿಂದಿಲ್ಲ ಅಂದ್ರೆ ಕೆಲವರಿಗೆ ಏನೋ ಕಳೆದುಕೊಂಡಂತೆ. ಅದರಲ್ಲೂ ಗಂಡು ಹೈಕ್ಳಿಗೆ ಪಾರ್ಟಿ ಮಾಡ್ಬೇಕು ಅಂದ್ರೆ ಚಿಕನ್ ಬೇಕೇ. ಇಂತಹ ಪಾರ್ಟಿ ಮಾಡೋ ಗಂಡು ಮಕ್ಳಿಗಾಗಿ ಸಿಂಪಲ್ ಆಗಿ ಫಟ್ ಅಂತಾ ಮಾಡ್ಬೋದಾದ ಚಿಕನ್ ರೆಸಿಪಿ ಇಲ್ಲಿದೆ ನೋಡಿ. ಹಾಗಾದ್ರೆ ಈ ಜಟ್ ಪಟ್ ಚಿಕನ್ ಮಸಾಲವನ್ನು ಹೇಗೆ ಮಾಡೋದು ಅಂತಾ ನೋಡೋಣ.

ಬೇಕಾಗುವ ಸಾಮಾಗ್ರಿಗಳು

ಕೋಳಿ- ಅರ್ಧ ಕೆಜಿ

ಟೊಮ್ಯಾಟೋ- 1

ಮೆಣಸಿನ ಹುಡಿ-1 ಟೇಬಲ್ ಸ್ಪೂನ್

ಅರಶಿನ ಹುಡಿ- 1 ಟೇಬಲ್ ಸ್ಪೂನ್

ಹಸಿ ಮೆಣಸು-1

ಈರುಳ್ಳಿ-1 (ಮಧ್ಯಮ ಗಾತ್ರದ್ದು)

ಬೆಳ್ಳುಳ್ಳಿ (3 ರಿಂದ 4 ಎಸಳು)

ಉಪ್ಪು ರುಚಿಗೆ ತಕ್ಕಷ್ಟು

ಎಣ್ಣೆ – 2 ಟೇಬಲ್ ಸ್ಪೂನ್

ಮಾಡುವ ವಿಧಾನ

ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಹಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಬೇಕು. ಬಳಿಕ ಟೊಮ್ಯಾಟೋ ಹಸಿ ಮೆಣಸು ಹಾಕಬೇಕು. ಅದು ಬೆಂದ ಕೂಡಲೇ ಚಿಕನ್ ಹಾಕಬೇಕು. ನಂತರ ಅರಿಶಿನ ಹುಡಿ ಹಾಕಿ, ಸ್ವಲ್ಪ ಹೊತ್ತು ಬೇಯಲು ಬಿಡಬೇಕು. ಸ್ವಲ್ಪ ಬೇಯುತ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸಿನ ಹುಡಿ ಹಾಕಿ ಸ್ವಲ್ಪ ಬೇಯಲು ಬಿಡಿ. ಬೆಂದ ಬಳಿಕ ಕೆಳಗಿಸಿ. ಕೆಲವೇ ಕೆಲವು ವಸ್ತುಗಳನ್ನು ಬಳಸಿ ಫಟ್ ಅಂತಾ ಈ ರೀತಿ ಯಾರೂ ಬೇಕಾದರೂ ಚಿಕನ್ ಮಸಾಲ ಮಾಡಬಹುದು. ಟ್ರೈ ಮಾಡಿ ಕಮೆಂಟ್ ಮೂಲಕ ತಿಳಿಸಿ.

- Advertisement -
spot_img

Latest News

error: Content is protected !!