Saturday, June 27, 2026
Homeಕರಾವಳಿಬೆಳ್ತಂಗಡಿ : ಹಾಡುಹಗಲೇ ಮನೆಗೆ ಕನ್ನ : ಮನೆಯಲ್ಲಿ ಯಾರು ಇಲ್ಲದ ವೇಳೆ ನಡೆದ ಕಳ್ಳತನ

ಬೆಳ್ತಂಗಡಿ : ಹಾಡುಹಗಲೇ ಮನೆಗೆ ಕನ್ನ : ಮನೆಯಲ್ಲಿ ಯಾರು ಇಲ್ಲದ ವೇಳೆ ನಡೆದ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡುಹಗಲೇ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ನಡೆದ ಘಟನೆ ಉಜಿರೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೇಲಿಕ್ಸ್ ಮನೆಯ ಹಿಂಭಾಗದ ಮೂಲಕ ಕಳ್ಳರು ನುಗ್ಗಿದ್ದು ಮನೆಯಲ್ಲಿದ್ದ 15 ಪವನ್ ಚಿನ್ನ ಹಾಗೂ  20,000 ಹಣ ಕಳ್ಳತನ ಶಂಕೆ ವ್ಯಕ್ತಪಡಿಸಿದ್ದಾರೆ.

ಫೇಲಿಕ್ಸ್ ಮಗಳು ಗ್ಲೇನಿಸಾ ಇಂದು ಕಾಲೇಜ್ ಮುಗಿಸಿ ಮಧ್ಯಾಹ್ನ 1:10 ವೇಳೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಾಲೀಕ ಫೇಲಿಕ್ಸ್ ಮೇಲಂತಬೆಟ್ಟು ಬಳಿ ಸೆಂಟ್ರಿಂಗ್ ಕೆಲಸಕ್ಕೆ ಹೋಗಿದ್ದು,  ಪತ್ನಿ ಗ್ರೇಟಾ ಸ್ಥಳೀಯ ಶಾಲೆಯಲ್ಲಿ ಕೆಲಸಕ್ಕೆ ಹೋಗಿದ್ದರು. ಮನೆಗೆ ಬಂದು ನೋಡಿ ಮಗಳು ಸ್ಥಳೀಯ ಮನೆಗೆ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಳು.ಘಟನಾ ಸ್ಥಳಕ್ಕೆ ಬೆಳ್ತಂಗಡಿ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಸಬ್ ಇನ್ಸ್ಪೆಕ್ಟರ್ ಧನ್ ರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.ಪರಿಶೀಲನೆಗೆ ಮಂಗಳೂರಿನಿಂದ ಶ್ವಾನ ದಳ ಮತ್ತು FSL ಟೀಂ ಬರಲು ಕಾಯುತ್ತಿದ್ದಾರೆ.

- Advertisement -

Latest News

error: Content is protected !!