Saturday, June 13, 2026
Homeಕರಾವಳಿಮಂಗಳೂರು: ಮನೆ ಕಳ್ಳತನದ ಆರೋಪಿಯ ಬಂಧನ

ಮಂಗಳೂರು: ಮನೆ ಕಳ್ಳತನದ ಆರೋಪಿಯ ಬಂಧನ

- Advertisement -
- Advertisement -

ಉಳ್ಳಾಲ: ಇಲ್ಲಿನ ಮುನ್ನೂರು ಗ್ರಾಮ ಮದನಿ ನಗರದಲ್ಲಿ ಅಬ್ದುಲ್ ರಶೀದ್‍ ಎಂಬವರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮದನಿ ನಗರ ನಿವಾಸಿ ಕಬೀರ್ ತಸ್ಲಿಂ (25) ಬಂಧಿತ ಆರೋಪಿ.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಈತನಿಗೆ ನ್ಯಾಯಾಲಯದ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರು. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕಳವಾದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!