Friday, June 26, 2026
Homeಕರಾವಳಿಬಂಟ್ವಾಳ: ಪ್ರಾಮಾಣಿಕತೆ ಮೆರೆದ ಆಟೋ‌ ಚಾಲಕ: ಕಳೆದು ಹೋದ ಬ್ಯಾಗ್ ನ್ನು ಮಹಿಳೆಗೆ ಹಸ್ತಾಂತರ

ಬಂಟ್ವಾಳ: ಪ್ರಾಮಾಣಿಕತೆ ಮೆರೆದ ಆಟೋ‌ ಚಾಲಕ: ಕಳೆದು ಹೋದ ಬ್ಯಾಗ್ ನ್ನು ಮಹಿಳೆಗೆ ಹಸ್ತಾಂತರ

- Advertisement -
- Advertisement -

ಬಂಟ್ವಾಳ; ಆಟೋ‌ ಚಾಲಕರೊಬ್ಬರು ಬಿದ್ದು ಸಿಕ್ಕಿದ ಮಹಿಳೆಯೊಬ್ಬರ ಬ್ಯಾಗ್ ನ್ನು ಅವರಿಗೆ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಬಂಟ್ವಾಳದ ಮೂಡಾ ನಿವಾಸಿಯಾಗಿರುವ ರುಕ್ಸಾನ ಅವರು ಇಂದು ಮಾಣಿಯಿಂದ ಬಿ. ಸಿ ರೋಡ್ ಗೆ ಸ್ಕೂಟಿಯಲ್ಲಿ ಹೋಗುತ್ತಿರುವಾಗ ಅವರ  ವ್ಯಾನಿಟಿ ಬ್ಯಾಗ್ ಬಿದ್ದು ಹೋಗಿತ್ತು. ವ್ಯಾನಿಟಿ ಬ್ಯಾಗ್ ನಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಕಳೆದು ಇತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸ್ಥಳೀಯರಿಗೆ ದೊರತರೆ ನೀಡುವಂತೆ ವಿನಂತಿಸಿಕೊಂಡಿದ್ದರು.

ಮಾಣಿಯಿಂದ ಕಲ್ಲಡ್ಕಕ್ಕೆ ತೆರಳುತ್ತಿದ್ದ ಆಟೋ ಚಾಲಕ   ಶಂಕರ್ ನಾರಾಯಣ ಶೆಟ್ಟಿ  ಅವರಿಗೆ ಈ ಬ್ಯಾಗ್ ದೊರೆತಿದೆ. ಅವರು‌ ಅದನ್ನು  ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ್ದಾರೆ. ಬಳಿಕ ಪೊಲೀಸರ  ಸಮಕ್ಷಮದಲ್ಲಿ ಬ್ಯಾಗ್ ನ್ನು ಮಹಿಳೆಗೆ ಹಿಂದಿರುಗಿಸಲಾಯಿತು.

- Advertisement -

Latest News

error: Content is protected !!