Thursday, June 4, 2026
Homeಕರಾವಳಿಸುಳ್ಯ: ಬೆಳ್ಳಾರೆಯಲ್ಲಿ ಬಿಜೆಪಿ‌ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ಗುಂಪಿನಿಂದ ಮಾರಾಕಾಸ್ತ್ರಗಳಿಂದ ದಾಳಿ: ಚಿಂತಾಜನಕ‌ ಸ್ಥಿತಿಯಲ್ಲಿ ಯುವಕ

ಸುಳ್ಯ: ಬೆಳ್ಳಾರೆಯಲ್ಲಿ ಬಿಜೆಪಿ‌ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳ ಗುಂಪಿನಿಂದ ಮಾರಾಕಾಸ್ತ್ರಗಳಿಂದ ದಾಳಿ: ಚಿಂತಾಜನಕ‌ ಸ್ಥಿತಿಯಲ್ಲಿ ಯುವಕ

- Advertisement -
- Advertisement -

ಸುಳ್ಯ: ಕಳಂಜದಲ್ಲಿ ಮುಸ್ಲಿಂ ಯುವಕನ‌ ಕೊಲೆ ಪ್ರಕರಣ ಮಾಸುವ ಮುನ್ನವೇ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ. ದುಷ್ಕರ್ಮಿಗಳ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ.

ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿರುವ ಪ್ರವೀಣ್ ನೆಟ್ಟಾರು ಹಲ್ಲೆಗೊಳಗಾದವರು. ಇವರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದರು.

ಬೆಳ್ಳಾರೆಯಲ್ಲಿ ಪೆರುವಾಜೆ ಕ್ರಾಸ್ ಬಳಿ ಅಕ್ಷಯ ಎಂಬ ಕೋಳಿ‌ ಮಾಂಸ ಅಂಗಡಿ ಹೊಂದಿದ್ದಾರೆ ಪ್ರವೀಣ್. ಸಂಜೆ ಅಂಗಡಿಯಲ್ಲಿದ್ದ ವೇಳೆ ಏಕಾಏಕಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಅಂಗಡಿಯ ಬಾಗಿಲು‌ ಮುಚ್ಚಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಚಿಂತಾಜನಕ‌ ಸ್ಥಿತಿಯಲ್ಲಿರುವ ಪ್ರವೀಣ್ ಅವರನ್ನು ಮಂಗಳೂರಿಗೆ ಕರೆದೊಯ್ಯಲಾಗುತ್ತಿದೆ.

- Advertisement -

Latest News

error: Content is protected !!