Friday, June 26, 2026
Homeಕರಾವಳಿವಿಟ್ಲದಲ್ಲಿ  ಹಿಂದೂ ಕಾರ್ಯಕರ್ತ ನಿಧನ

ವಿಟ್ಲದಲ್ಲಿ  ಹಿಂದೂ ಕಾರ್ಯಕರ್ತ ನಿಧನ

- Advertisement -
- Advertisement -

ವಿಟ್ಲ: ಹಿಂದೂ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ ಯುವಕ‌ ಸಾವನ್ನಪ್ಪಿದ ಘಟನೆ  ವಿಟ್ಲ ಸಮೀಪದ ಕನ್ಯಾನ ಮಿತ್ತನಡ್ಕ ಎಂಬಲ್ಲಿ ನಡೆದಿದೆ.   ದೀಕ್ಷಿತ್ ನಾಯಕ್ (25)  ಮೃತ ದುರ್ದೈವಿ.

ಕಳೆದ ಕೆಲವು ದಿನಗಳಿಂದ ದೀಕ್ಷಿತ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇನ್ನು ದೀಕ್ಷಿತ್ ರವರ ತಂದೆ ಕಳೆದ ವರ್ಷ ಅನಾರೋಗ್ಯದಿಂದ ಮರಣ ಹೊಂದಿದ್ದರು‌.ಏಕೈಕ ಪುತ್ರನಾಗಿದ್ದ ಇವರು ತಂದೆಯ ಹೋಟೆಲ್ ಮತ್ತು ಅಂಗಡಿಯನ್ನು ಮುನ್ನಡೆಸುತ್ತಾ, ಮನೆಗೆ ಆಧಾರ ಸ್ತಂಭವಾಗಿದ್ದರು‌. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣವನ್ನು ಪಡೆದಿದ್ದ ಇವರು  ಗ್ರಾಮದ ಪ್ರತಿಯೊಂದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಮೃತರು ತಾಯಿ, ಸಹೋದರಿ ಮತ್ತು ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ

- Advertisement -

Latest News

error: Content is protected !!