- Advertisement -
- Advertisement -
ಪುತ್ತೂರು ನಗರದಲ್ಲಿ ಇತ್ತೀಚೆಗೆ ದರ್ಬೆಯಲ್ಲಿ ವರ್ತಕರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವನ್ನು ಆರೋಪಿಸಿ, ಹಿಂದೂ ಜಾಗರಣ ವೇದಿಕೆ ಆಗಸ್ಟ್ 25ರಂದು `ಸ್ವಯಂಪ್ರೇರಿತ ಪುತ್ತೂರು ಬಂದ್‌ಗೆ’ ಕರೆ ನೀಡಿದೆ.
ಈ ಬಂದ್ ಕರೆಗೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ತಮ್ಮ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ವರ್ತಕರ ಹಿತರಕ್ಷಣೆ ಮತ್ತು ಪುತ್ತೂರು ನಗರದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಕರೆಯನ್ನು ನೀಡಲಾಗಿದ್ದು, ನಗರದ ಪ್ರಮುಖ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ನಾಗರಿಕರು ಅಕ್ಟೋಬರ್ 25ರಂದು ಸ್ವಯಂಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕರಿಸಬೇಕಾಗಿ ವೇದಿಕೆಯು ಮನವಿ ಮಾಡಿದೆ.
- Advertisement -


