Monday, May 20, 2024
Homeಕರಾವಳಿಉಡುಪಿಉಡುಪಿ: ಹಿಜಾಬ್ - ಕೇಸರಿ ಶಾಲು ವಿವಾದದ ಹಿನ್ನಲೆ ಫೆ.21 ರಿಂದ 28ರವರೆಗೆ ಪ್ರೌಢಶಾಲಾ ವ್ಯಾಪ್ತಿಯಲ್ಲಿ...

ಉಡುಪಿ: ಹಿಜಾಬ್ – ಕೇಸರಿ ಶಾಲು ವಿವಾದದ ಹಿನ್ನಲೆ ಫೆ.21 ರಿಂದ 28ರವರೆಗೆ ಪ್ರೌಢಶಾಲಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

spot_img
- Advertisement -
- Advertisement -

ಉಡುಪಿ ಜಿಲ್ಲೆಯಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದದ ಹಿನ್ನೆಲೆ , ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳ ಸುತ್ತ ಮುತ್ತಲಿನ 200 ಮೀ . ಪ್ರದೇಶದಲ್ಲಿ ಫೆಬ್ರವರಿ 21 ರ ಬೆಳಗ್ಗೆ 6 ಗಂಟೆಯಿಂದ ಫೆ . 28 ರ ಸಂಜೆ 6 ಗಂಟೆಯವರೆಗೆ ದಂಡ ಪ್ರಕ್ರಿಯೆ ಸಂಹಿತೆ 1973 ರ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ .ಎಂ.ಆದೇಶಿಸಿರುತ್ತಾರೆ .

ಈ ಹೊತ್ತಿನಲ್ಲಿ ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದು , ಯಾವುದೇ ವ್ಯಕ್ತಿಯ ಜಾತಿ , ಧರ್ಮ , ಕೋಮು , ಪಂಥಗಳಿಗೆ ಬಾಧಕ ಉಂಟು ಮಾಡಬಹುದಾದಂತಹ ಚಟುವಟಿಕೆಯನ್ನು ನಡೆಸುವಂತಿಲ್ಲ.

ಪ್ರಚೋದನಾಕಾರಿ ಭಾಷಣ , ಗಾಯನ ಇತ್ಯಾದಿ ಚಟುವಟಿಕೆ , ಶಸ್ತ್ರ , ದೊಣ್ಣೆ , ಕತ್ತಿ , ಈಟಿ ಬಂದೂಕು , ಚಾಕು, ಕೋಲು , ಲಾಠಿ ಅಥವಾ ದೈಹಿಕ ಹಿಂಸೆಯನ್ನು ಉಂಟು ಮಾಡುವ ಇತರ ವಸ್ತುಗಳ ಒಯ್ಯುವಿಕೆ ಅವಕಾಶವಿಲ್ಲ.

ಪ್ರತಿಭಟನೆ, ವಿಜಯೋತ್ಸವ , ಸಾರ್ವಜನಿಕ ಮೆರವಣಿಗೆ , ಸಾರ್ವಜನಿಕ ಹಾಗೂ ರಾಜಕೀಯ ಸಭೆ ಸಮಾರಂಭ ನಡೆಸುವುದು, ಬಹಿರಂಗ ಘೋಷಣೆಗಳನ್ನು ಕೂಗುವುದು , ಆವೇಶಭರಿತ ಭಾಷಣ ಮಾಡುವುದು , ಭಿತ್ತಿ ಪತ್ರಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ .

- Advertisement -
spot_img

Latest News

error: Content is protected !!