Friday, June 5, 2026
Homeಕರಾವಳಿಉಡುಪಿಕೊರೊನಾ‌ ಲಸಿಕೆ ಪಡೆದ ಬಳಿಕ‌‌‌ ಕಾಣಿಸಿಕೊಂಡ ಕೈ ನೋವು; ಮನ ನೊಂದು ಯುವಕ ಆತ್ಮಹತ್ಯೆ

ಕೊರೊನಾ‌ ಲಸಿಕೆ ಪಡೆದ ಬಳಿಕ‌‌‌ ಕಾಣಿಸಿಕೊಂಡ ಕೈ ನೋವು; ಮನ ನೊಂದು ಯುವಕ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಕೊರೊನಾ‌ ಲಸಿಕೆ ಪಡೆದ ಬಳಿಕ‌‌‌ ಕೈ ನೋವು  ಕಾಣಿಸಿಕೊಂಡದ್ದರಿಂದ ಯುವಕ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನ ಕಾರ್ಕಳದ ಕೌಡೂರು ಗ್ರಾಮದ ತಡ್ಪೆದೋಟ ಎಂಬಲ್ಲಿ ನಿನ್ನೆ ಸಂಜೆ ವೇಳೆ ನಡೆದಿದೆ.

ಮೃತರನ್ನು ಕೌಡೂರು ಗ್ರಾಮದ ತಡ್ಪೆದೋಟ ನಿವಾಸಿ ಪ್ರದೀಪ್ ಪೂಜಾರಿ (37) ಮೃತ ದುರ್ದೈವಿ. ಕಳೆದ ವರ್ಷ ಕೊರೋನಾ ಸಂದರ್ಭ ಇವರ ಕೈಗೆ ಲಸಿಕೆ ನೀಡಿದ್ದು ಇದರಿಂದ ಕೈ ನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ ಎನ್ನಲಾಗಿದೆ.

ಇದರಿಂದ ಮಾನಸಿಕ ನೊಂದ ಅವರು ಮನೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!