Wednesday, June 3, 2026
Homeತಾಜಾ ಸುದ್ದಿರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ; ವಿಮಾನ ನಿಲ್ದಾಣ, ರಸ್ತೆಗಳು ಜಲಾವೃತ!

ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ; ವಿಮಾನ ನಿಲ್ದಾಣ, ರಸ್ತೆಗಳು ಜಲಾವೃತ!

- Advertisement -
- Advertisement -

ನವದೆಹಲಿ: ರಾಜಧಾನಿ ದೆಹಲಿ ಮತ್ತು ಸುತ್ತಮುತ್ತ ಭಾಗಗಳಲ್ಲಿ ಶನಿವಾರ ನಸುಕಿನಿಂದಲೇ ಸತತ ಮಳೆಯಾಗುತ್ತಿದ್ದು, ವರುಣನ ಆರ್ಭಟದಿಂದಾಗಿ ವಿಮಾನ ನಿಲ್ದಾಣ, ರಸ್ತೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಜನರ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ.

ಮಳೆಗೆ ದೆಹಲಿ ವಿಮಾನ ನಿಲ್ದಾಣದ ಭಾಗಶಃ ನೀರಿನಿಂದ ಮುಳುಗಡೆಯಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ನೀರು ತುಂಬಿಕೊಂಡು ವಿಮಾನಗಳ ಹಾರಾಟಕ್ಕೆ ಅಡಚಣೆಯುಂಟಾಗಿದೆ.

ಭಾರತೀಯ ಹವಾಮಾನವು ಬೆಳಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಆರೆಂಜ್​ ಅಲರ್ಟ್ ಘೋಷಿಸಿತ್ತು. ಬಳಿಕ ಮತ್ತೆ 11:30 ರಿಂದ 2:30ರವರೆಗೆ ವಿಸ್ತರಿಸಲಾಗಿದೆ. ಶುಕ್ರವಾರ ದೆಹಲಿಯಲ್ಲಿ 1100 ಮಿ.ಮೀ ಮಳೆಯಾಗಿದ್ದು ಇದು ಕಳೆದ 46 ವರ್ಷಗಳಲ್ಲಿ ದಾಖಲೆಯಾದ ದಾಖಲೆ ಪ್ರಮಾಣದ ಮಳೆಯಾಗಿದೆ. ಇದಕ್ಕೂ ಮೊದಲು 2003ರಲ್ಲಿ ದೆಹಲಿಯು 1050 ಮಿ.ಮೀ ಮಳೆಗೆ ಸಾಕ್ಷಿಯಾಗಿತ್ತು.

- Advertisement -

Latest News

error: Content is protected !!