- Advertisement -
- Advertisement -
ಸುಳ್ಯ: ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಅರಂತೋಡು ಗ್ರಾಮದ ಉದಯನಗರದಲ್ಲಿ ಸಂಸುದ್ದಿನ್ ಮಾಲಕತ್ವದ ಬಾಡಿಗೆ ಮನೆಯ ಆವರಣ ಗೋಡೆ ಜರಿದು ಪಕ್ಕದಲ್ಲಿರುವ ಅಬ್ದುಲ್ ರಹಿಮಾನ್ ಮತ್ತು ರುಖಿಯಾರವರ ಮನೆಗೆ ಹಾನಿಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.
ಅಬ್ದುಲ್ ರಹಿಮಾನ್ ರವರ ಶಿಟೌಟ್ ನ ಫಿಲ್ಲರ್ ಮತ್ತು ಟೈಲ್ಸ್ ಹಾಗೂ ಎದುರಿನ ಬಾಗಿಲಿಗೆ ಹಾನಿಯಾಗಿದ್ದು ರುಖಿಯಾರವರು ಹೊಸ ಮನೆಯ ಕೆಲಸ ಪ್ರಾರಂಭಿಸಿ ಸ್ಥಗಿತ ಗೊಳಿಸಿದ್ದು ಮನೆಯ ಗೋಡೆ ಮತ್ತು ಬಾಗಿಲಿಗೆ ಹಾನಿಯಾಗಿದೆ.
ವಿಷಯ ತಿಳಿದ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಸ್ಥಳಕ್ಕೆ ಭೇಟಿ ನೀಡಿದರು.
- Advertisement -