Saturday, May 4, 2024
Homeತಾಜಾ ಸುದ್ದಿಕಾರಿನಲ್ಲಿ ಸೆಕ್ಸ್ ನಲ್ಲಿ ತೊಡಗಿದ್ದವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಬಿತ್ತು ಭಾರೀ ದಂಡ

ಕಾರಿನಲ್ಲಿ ಸೆಕ್ಸ್ ನಲ್ಲಿ ತೊಡಗಿದ್ದವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಬಿತ್ತು ಭಾರೀ ದಂಡ

spot_img
- Advertisement -
- Advertisement -

ಆಸ್ಟ್ರೇಲಿಯಾ; ಕಾರಿನಲ್ಲಿ ಹೋಗುತ್ತಿದ್ದ ವೇಳೆ ಸೆಕ್ಸ್ ನಲ್ಲಿ ತೊಡಗಿದ್ದವನಿಗೆ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿರುವ ವಿಚಿತ್ರ ಘಟನೆಯೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‌ನ ಹೆದ್ದಾರಿಯಲ್ಲಿ ನಡೆದಿದೆ. ಅಮನ್​ ಎಂಬಾತನಿಗೆ ಪೊಲೀಸರು £600 (ಅಂದಾಜು ರೂ. 56,000) ದಂಡ ವಿಧಿಸಿದ್ದಾರೆ.

ಈತ ಸೀಟ್​ ಬೆಲ್ಟ್​ ಧರಿಸದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾದ ನಂತರ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಹೆದ್ದಾರಿಯ ಒಂದೆಡೆಯಿಂದ ಬರುತ್ತಿರುವಾಗಲೇ ಮತ್ತೊಂದು ಕಡೆಯಲ್ಲಿನ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಆತ ಬರುತ್ತಿದ್ದಂತೆಯೇ ಪೊಲೀಸರು ದಂಡ ವಿಧಿಸಿದ್ದಾರೆ. ನಂತರ ಇದರ ವಿಡಿಯೋ ಹರಿಬಿಡಲಾಗಿದ್ದು, ಜನರಿಗೆ ಎಚ್ಚರಿಕೆ ನೀಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಶ್ವಾದ್ಯಂತ ಸುದ್ದಿ ಮಾಡುತ್ತಿದೆ.

ಈ ರೀತಿ ಕಾರು ಚಾಲನೆ ಮಾಡುತ್ತಲೇ ಸೀಟ್​ಬೆಲ್ಟ್​ ಧರಿಸದೇ ಇರುವುದು ಪ್ರಾಣಕ್ಕೆ ಅಪಾಯಕಾರಿಯಾಗಿದೆ ಎಂದು ದಂಡ ವಿಧಿಸಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದಾರೆ. ಪ್ರಯಾಣಿಕರ ಸುರಕ್ಷತೆ ನಮ್ಮ ಕರ್ತವ್ಯ ಎಂದಿದ್ದಾರೆ.

- Advertisement -
spot_img

Latest News

error: Content is protected !!