Friday, May 17, 2024
Homeಕರಾವಳಿಸುಳ್ಯ : ಕಲ್ಲುಗುಂಡಿಯಲ್ಲಿ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಗೆ ಬೀಗ

ಸುಳ್ಯ : ಕಲ್ಲುಗುಂಡಿಯಲ್ಲಿ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಗೆ ಬೀಗ

spot_img
- Advertisement -
- Advertisement -

ಸುಳ್ಯ : ಕಲ್ಲುಗುಂಡಿಯಲ್ಲಿ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ ಗೆ ಆರೋಗ್ಯ ಇಲಾಖೆ ಬೀಗ ಜಡಿದು , ಕ್ಲಿನಿಕ್‌ ನಡೆಸುತ್ತಿದ್ದವರ ಮೇಲೆ ಕೇಸು ದಾಖಲಿಸಲಾಗಿದೆ.  ಕ್ಲಿನಿಕ್‌ನ ವಸ್ತುನ್ನು ಮುಟ್ಟುಗೋಲು ಹಾಕಲಾಗಿದೆ.

ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರೋಸ್ತಿ ಮ್ಯಾಥ್ಯೂ ಪರವಾನಿಗೆ ಇಲ್ಲದೆ ಮಾಂಬುಳಿ ಕ್ಲಿನಿಕ್‌ ಎಂಬ ನಡೆಸುತ್ತಿದ್ದರು. ಈ ಕುರಿತು ಆರೋಗ್ಯ ಇಲಾಖೆಗೆ ದೂರು ಹೋಗಿತ್ತು. ಬಳಿಕ ಆರೋಗ್ಯ ಇಲಾಖೆ ಕಡೆಯಿಂದ ಕ್ಲಿನಿಕ್‌ ನಡೆಸುತ್ತಿರುವ ಬಗ್ಗೆ ಕರ್ನಾಟಕ ಆಯುರ್ವೇದ, ಯುವಾನಿ ವೈದ್ಯ ಮಂಡಳಿಯಿಂದ ನೋಂದಣಿ ಪ್ರಮಾಣ ಪತ್ರ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ 3 ಬಾರಿ ನೋಟಿಸ್‌ ನೀಡಲಾಗಿತ್ತು.

ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.  ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್‌ ನಡೆಸುವುದು ಕೆಪಿಎಂಇ ಕಾಯ್ದೆ 19ರ ಪ್ರಕಾರ ಅಕ್ರಮವಾಗುತ್ತದೆ. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಕೆಪಿಎಂಇ ನೋಡಲ್‌ ಅಧಿಕಾರಿ ಡಾ| ದೀಪಾ ಪ್ರಭು ನೇತೃತ್ವದ ತಂಡ ಕ್ಲಿನಿಕ್‌ ಗ ಬೀಗ ಜಡಿದಿದೆ.

- Advertisement -
spot_img

Latest News

error: Content is protected !!