Saturday, June 1, 2024
Homeತಾಜಾ ಸುದ್ದಿಕಾಸರಗೋಡು: ತಲೆ ಕೆಳಗಾಗಿ ಧ್ವಜಾರೋಹಣ ಮಾಡಿದ ಕೇರಳ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್

ಕಾಸರಗೋಡು: ತಲೆ ಕೆಳಗಾಗಿ ಧ್ವಜಾರೋಹಣ ಮಾಡಿದ ಕೇರಳ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್

spot_img
- Advertisement -
- Advertisement -

ಮಂಗಳೂರು: ಗಣರಾಜ್ಯೋತ್ಸವ ದಿನದಂದು ಕಾಸರಗೋಡಿನಲ್ಲಿ ರಾಷ್ಟ್ರ ಧ್ವಜವನ್ನು ತಲೆ ಕೆಳಗಾಗಿ ಹಾರಿಸಿದ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲಾಡಳಿತದ ವತಿಯಿಂದ ಕಾಸರಗೋಡಿನ‌ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇರಳ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಅವರು ತಲೆ ಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ.

ಧ್ವಜ ಏರಿಸಿ ರಾಷ್ಟ್ರಗೀತೆ ಮುಗಿಯುವವರೆಗೂ ರಾಷ್ಟ್ರ ಧ್ವಜ ತಲೆಕೆಳಗಾಗಿಯೇ ಇತ್ತು, ಈ ನಡುವೆ ವ್ಯಕ್ತಿಯೋರ್ವರು ವಿಷಯ ತಿಳಿಸಿದ ಬಳಿಕ ಧ್ವಜ ಕೆಳಗಿಳಿಸಿ ಮತ್ತೆ ಹಾರಿಸಲಾಯಿತು. ಈ ಘಟನೆ ಕುರಿತು ಎಡಿಎಂ ( ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್) ತನಿಖೆಗೆ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!