Thursday, May 2, 2024
Homeಕರಾವಳಿಬೆಳ್ತಂಗಡಿ : ಹೆಡ್ ಕಾನ್ಟೇಬಲ್ ಹರಿಪ್ರಸಾದ್ ಎಎಸ್ಐ ಆಗಿ ಬಡ್ತಿ: ಬೆಳ್ತಂಗಡಿ ಸಂಚಾರಿ ಠಾಣೆಗೆ ಎಎಸ್ಐ...

ಬೆಳ್ತಂಗಡಿ : ಹೆಡ್ ಕಾನ್ಟೇಬಲ್ ಹರಿಪ್ರಸಾದ್ ಎಎಸ್ಐ ಆಗಿ ಬಡ್ತಿ: ಬೆಳ್ತಂಗಡಿ ಸಂಚಾರಿ ಠಾಣೆಗೆ ಎಎಸ್ಐ ಆಗಿ ನೇಮಕ

spot_img
- Advertisement -
- Advertisement -

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ(ACB) ಹೆಡ್ ಕಾನ್ಟೇಬಲ್ ಆಗಿದ್ದ ಹರಿಪ್ರಸಾದ್ ಎಎಸ್ಐ ಆಗಿ ಬಡ್ತಿ ಹೊಂದಿದ್ದಾರೆ. ಇಂದು ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಹರಿಪ್ರಸಾದ್ ಎಎಸ್ಐ ಆಗಿ ಅಧಿಕಾರ ಸ್ವೀಕರಿಸಿದರು.

ಹರಿಪ್ರಸಾದ್ 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಪುತ್ತೂರು ಗ್ರಾಮಂತರ, ಪುತ್ತೂರು ನಗರ, ಪಾಂಡೇಶ್ವರ , ಕಡಬ, ಉಪ್ಪಿನಂಗಡಿ, ಬಂಟ್ವಾಳ ಮುಂತಾದ ಪೊಲೀಸ್ ಠಾಣೆಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ನಂತರ ಕಳೆದ ಐದು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಹೆಡ್ ಕಾನ್ಟೇಬಲ್ ಆಗಿ ಕರ್ತವ್ಯ ಮಾಡಿ ಇದೀಗ ಎಎಸ್ಐ ಅಗಿ ಬಡ್ತಿ ಪಡೆದು ಬೆಳ್ತಂಗಡಿ ಸಂಚಾರಿ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 26 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ,ಅನೇಕ ಗಂಭೀರ ಅಪರಾಧ ಪ್ರಕರಣ ಹಾಗೂ ಎಸಿಬಿ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಹೆಡೆಮುರಿ ಕಟ್ಟಲು ಹಿರಿಯ ಅಧಿಕಾರಿಗಳಿಗೆ ಉತ್ತಮ ರೀತಿಯಲ್ಲಿ ನಿಷ್ಠೆಯಿಂದ ಸಹಾಯ ಮಾಡಿರುತ್ತಾರೆ.

ಇದಕ್ಕಾಗಿ ಎಪ್ರಿಲ್ 2 ರಂದು 2022 ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಕೂಡ ಲಭಿಸಿದೆ. ಹರಿಪ್ರಸಾದ್‌ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿಯಾಗಿದ್ದು ಅವರ ತಂದೆ ಕೆ.ವೆಂಕಟಾಚಲ ನಿವೃತ್ತ ಅಬಕಾರಿ ಇಲಾಖೆಯಲ್ಲಿ ಹೆಡ್ ಗಾರ್ಡ್ ಆಗಿದ್ದರು. ತಂದೆ ಕೆ.ವೆಂಕಟಾಚಲ ಮತ್ತು ತಾಯಿ ಕೆ.ಕಸ್ತೂರಿ ದಂಪತಿ ಮೊದಲ ಮಗ ಹರಿಪ್ರಸಾದ್.

- Advertisement -
spot_img

Latest News

error: Content is protected !!