Saturday, October 10, 2026
Homeಕರಾವಳಿಮಂಗಳೂರುಮಂಗಳೂರು:ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಅಪ್ಪಳಿಸಿದ ಗಿಡುಗ: ಮುಂಭಾಗದ ಗಾಜು ಪುಡಿ ಪುಡಿ

ಮಂಗಳೂರು:ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಅಪ್ಪಳಿಸಿದ ಗಿಡುಗ: ಮುಂಭಾಗದ ಗಾಜು ಪುಡಿ ಪುಡಿ

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ಗೆ ಗಿಡುಗವೊಂದು ಏಕಾಏಕಿ ಅಪ್ಪಳಿಸಿದ ಪರಿಣಾಮ, ಬಸ್ಸಿನ ಮುಂಭಾಗದ ಗಾಜು ಜಖಂಗೊಂಡ ಅಪರೂಪದ ಘಟನೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಎಂದಿನಂತೆ ಸಂಚರಿಸುತ್ತಿದ್ದ ವೇಳೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಬಸ್ ವೇಗವಾಗಿ ಸಾಗುತ್ತಿದ್ದಾಗ ಹಠಾತ್ತನೆ ಗಿಡುಗವೊಂದು ಅಡ್ಡಬಂದು ಬಸ್ಸಿನ ಮುಂಭಾಗದ ಗಾಜಿಗೆ ಜೋರಾಗಿ ಬಡಿದಿದೆ.

ಢಿಕ್ಕಿಯ ತೀವ್ರತೆಗೆ ಬಸ್ಸಿನ ಮುಂಭಾಗದ ಗಾಜು ಸಂಪೂರ್ಣವಾಗಿ ಬಿರುಕುಬಿಟ್ಟು ನುಚ್ಚುನೂರಾಗಿದ್ದು, ಬಸ್‌ಗೆ ಹಾನಿಯಾಗಿದೆ. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಬಸ್‌ನ ಚಾಲಕ ಹಾಗೂ ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದರು. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!