Thursday, June 4, 2026
Homeತಾಜಾ ಸುದ್ದಿಮ್ಯಾಟ್ರಿಮೋನಿ ಮೂಲಕ ಲಕ್ಷಾಂತರ ಹಣ ಪೀಕಿ ವ್ಯಕ್ತಿಗೆ ಮೋಸ ಮಾಡಿದ ಮಹಿಳೆ

ಮ್ಯಾಟ್ರಿಮೋನಿ ಮೂಲಕ ಲಕ್ಷಾಂತರ ಹಣ ಪೀಕಿ ವ್ಯಕ್ತಿಗೆ ಮೋಸ ಮಾಡಿದ ಮಹಿಳೆ

- Advertisement -
- Advertisement -

ಹಾಸನ: ಮ್ಯಾಟ್ರಿಮೋನಿ ಮೂಲಕ ಪರಿಚಯ ಮಾಡಿಕೊಂಡು ಮಹಿಳೆಯೊಬ್ಬಳು ಹಾಸನದ ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಲಕ್ಷ್ಮೀ (32) ಮತ್ತು ಸಹಾಯ ಮಾಡಿದ ಕೋಲಾರದ ಶಿವಣ್ಣನನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನದ 40 ವರ್ಷದ ಅವಿವಾಹಿತ ಪರಮೇಶ್ ವಂಚನೆಗೆ ಒಳಗಾದವರು. ಶುಂಠಿ ಬೆಳೆದು ಜೀವನ ಸಾಗಿಸುತ್ತಿದ್ದ ಪರಮೇಶ್, ಮ್ಯಾಟ್ರೋಮೋನಿಯಲ್ಲಿ ಪರಿಚಯ ಆದಮೇಲೆ ಲಕ್ಷ್ಮಿಗೆ ಮದುವೆ ನೆಪದಲ್ಲಿ ಡಿಸೆಂಬರ್ 2019 ರಿಂದ ಜೂನ್ 2020 ರ ತನಕ ಸುಮಾರು 6 ಲಕ್ಷ ರೂಪಾಯಿಗಳನ್ನು ನೀಡಿದ್ದ. ನಂತರ ಲಕ್ಷ್ಮಿಗೆ ಫೋನ್ ಮಾಡಿ ಮದುವೆಯ ಕುರಿತು ಚರ್ಚೆ ಮಾಡಿದಾಗ ನನಗೆ ಕರೆ ಮಾಡಿ ಕಿರಿಕಿರಿ ಮಾಡಿದರೆ ಅತ್ಯಾಚಾರ ಕೇಸ್ ಹಾಕುತ್ತೇನೆ ಎಂದು ಲಕ್ಷ್ಮಿ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.

ಕೊನೆಗೆ ಪರಮೇಶ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿವಣ್ಣನ ಸಹಾಯ ಪಡೆದು ಲಕ್ಷ್ಮೀ ಇದೇ ರೀತಿ ಮ್ಯಾಟ್ರೋಮೋನಿಯಲ್ಲಿ ಹಲವರಿಗೆ ಮೋಸ ಮಾಡುತ್ತಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಮಾನಕ್ಕೆ ಹದರಿ ಎಷ್ಟೋ ಜನರು ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!