- Advertisement -
- Advertisement -
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ದಂಪತಿ ಹೆಣ್ಣು ಮಗುವನ್ನು ಬರ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿದ್ದಾರೆ. ಮಗು ಮತ್ತು ತಾಯಿ ಹರ್ಷಿಕಾ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಭುವನ್ ತಿಳಿಸಿದ್ದಾರೆ. ಮಗುವಿಗೆ ‘ಚೈಕಾರ್ತಿ’ ಎಂದು ಹೆಸರಿಟ್ಟಿದ್ದಾರೆ.
ಇತ್ತೀಚೆಗೆ ರವಿವರ್ಮನ ಚಿತ್ರಕಲೆಯನ್ನು ಆಧಾರವಾಗಿಟ್ಟುಕೊಂಡು ವಿಭಿನ್ನವಾಗಿ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿ ಹರ್ಷಿಕಾ ಸುದ್ದಿಯಾಗಿದ್ದರು. ಕಳೆದ ಜುಲೈನಲ್ಲಿ ಕೊಡವ ಶೈಲಿಯ ಫೋಟೊಶೂಟ್ ಮಾಡಿಸಿ ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ಹರ್ಷಿಕಾ ಮತ್ತು ಭುವನ್ ಇಬ್ಬರೂ ಕೊಡಗಿನ ಮೂಲದವರು. ಬಹುಕಾಲ ಸ್ನೇಹಿತರಾಗಿದ್ದ ಈ ಜೋಡಿ 2023 ಆಗಸ್ಟ್ 24ರಂದು ವಿವಾಹವಾಗಿದ್ದರು.
- Advertisement -