Wednesday, May 1, 2024
Homeಕರಾವಳಿಬೆಳ್ತಂಗಡಿ; ಶಾಸಕ ಹರೀಶ್‌ ಪೂಂಜರಿಂದ ತಾಲೂಕಿನಾದ್ಯಂತ ಸಂಘಟನಾ ಪ್ರವಾಸ; 3 ದಿನಗಳಲ್ಲಿ 65ಕ್ಕೂ ಹೆಚ್ಚು ಶಕ್ತಿ...

ಬೆಳ್ತಂಗಡಿ; ಶಾಸಕ ಹರೀಶ್‌ ಪೂಂಜರಿಂದ ತಾಲೂಕಿನಾದ್ಯಂತ ಸಂಘಟನಾ ಪ್ರವಾಸ; 3 ದಿನಗಳಲ್ಲಿ 65ಕ್ಕೂ ಹೆಚ್ಚು ಶಕ್ತಿ ಕೇಂದ್ರಗಳಿಗೆ ಭೇಟಿ; ಶಾಸಕರ ಪ್ರವಾಸಕ್ಕೆ ಅಭೂತಪೂರ್ವ ಸ್ಪಂದನೆ

spot_img
- Advertisement -
- Advertisement -

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜಾ ಅವರು ತಾಲೂಕಿನಾದ್ಯಂತ ಸಂಘಟನಾತ್ಮಕ ಪ್ರವಾಸ ಕೈಗೊಂಡು ಅದರಂತೆ ಮಂಡಲ ಪದಾಧಿಕಾರಿಗಳೊಂದಿಗೆ ವಿಧಾನಸಭಾ ಚುನಾವಣೆ-2023ರ ಪೂರ್ವ ಭಾವಿ ಸಭೆ ನಡೆಸಿದ್ರು. ದಿನಾಂಕ 12.04.2023 ರಿಂದ ಮತ್ತು 14.04.2023 ರ ವರೆಗೆ 65 ಕ್ಕೂ ಅಧಿಕ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
ನಾರಾವಿ ಶ್ರೀ ಸೂರ್ಯನಾರಾಯಣ ದೇವರಿಗೆ ಕೈ ಮುಗಿದು, ತೀರ್ಥ ಪ್ರಸಾದ ಸ್ವೀಕರಿಸಿ ನಾರಾವಿ ಶಕ್ತಿ ಕೇಂದ್ರದಿಂದಲೇ ಪ್ರವಾಸ ಆರಂಭಿಸಿದ ಶಾಸಕರು ಕುತ್ಲೂರು, ಸುಲ್ಕೇರಿ, ಕೊಕ್ರಾಡಿ, ಅಂಡಿಂಜೆ, ಸಾವ್ಯ, ಪೆರಾಡಿ, ಮರೋಡಿ, ಕಾಶಿಪಟ್ಣ, ಬಡಕೊಡಿ, ಹೊಸಂಗಡಿ, ಆರಂಬೋಡಿ, ವೇಣೂರು, ಕರಿಮಣೇಲು, ಮೂಡುಕೋಡಿ, ಕುಕ್ಕೇಡಿ, ನಿಟ್ಟಡೆ, ಗರ್ಡಾಡಿ, ಪಿಲ್ಯ, ಕುದ್ಯಾಡಿ, ನಾವರ, ಪಡಂಗಡಿ, ನಾಲ್ಕೂರು, ಬಜಿರೆ, ತೆಂಕಕಾರಂದೂರು, ಬಡಗಕಾರಂದೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.


ದಿನಾಂಕ 13.04.2023 ರಂದು ಶಿಬಾಜೆ, ಅರಸಿನಮಕ್ಕಿ, ಶಿಶಿಲಾ, ರೆಖ್ಯಾ, ಗುಂಡೂರಿ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ, ಪುದುವೆಟ್ಟು ,ನೆರಿಯ, ಚಿಬಿದ್ರೆ ತೊಟತ್ತಾಡಿ, ಚಾರ್ಮಾಡಿ, ಮುಂಡಾಜೆ, ಉಜಿರೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು , ಮಲವಂತಿಗೆ ,ಇಂದಬೆಟ್ಟು, ನಾವೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.

ದಿನಾಂಕ 14.04.2023 ರಂದು ಸೋಣಂದೂರು, ಮಾಲಾಡಿ, ಕುಕ್ಕಳ, ನಡ, ಧರ್ಮಸ್ಥಳ, ನಡ, ಕನ್ಯಾಡಿ, ಲಾಯಿಲ, ಕೊಯ್ಯೂರು, ಬೆಳಾಲು, ಪಾರೆಂಕಿ, ಮಚ್ಚಿನ, ತಣ್ಣೀರುಪಂಥ, ಪುತ್ತಿಲ, ಬಾರ್ಯ ಶಕ್ತಿ ಕೇಂದ್ರಗಳ ಸಭೆ ನಡೆಸಿದರು.
ಸಭೆಯಲ್ಲಿ ಶಾಸಕ ಹರೀಶ್‌ ಪೂಂಜಾ ಅವರು ಸಂಘಟನಾತ್ಮಕ ಪ್ರವಾಸ ಕೈಗೊಂಡು ಪಕ್ಷವನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಶಕ್ತಿ ಕೇಂದ್ರಗಳ ಪ್ರವಾಸದಾದ್ಯಂತ ಅನ್ಯ ಪಕ್ಷಗಳ ಅನೇಕ ಕಾರ್ಯಕರ್ತರು, ನಾಯಕರು ಶಾಸಕ ಹರೀಶ್‌ ಪೂಂಜ ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಗೊಂಡರು. ಬಡಕೋಡಿ ಗ್ರಾಮದ ರವಿ ನಾಯ್ಕ್, ಮೂಡುಕೋಡಿ ಗ್ರಾಮದ ಜಯರಾಮ್, ಸುಧಾಕರ್ ಅವರನ್ನು ಹರೀಶ್‌ ಪೂಂಜಾ ಅವರು ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಅವರೊಂದಿಗೆ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.


ಶಕ್ತಿ ಕೇಂದ್ರಗಳ ಸಭೆಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್ ಕೋಟ್ಯಾನ್, ಬಿಜೆಪಿ ದಕ ಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಕೊರಗಪ್ಪ ನಾಯ್ಕ್‌, ಜಿಲ್ಲಾ ಎಸ್. ಟಿ. ಮೋರ್ಚಾ ಅಧ್ಯಕ್ಷರಾದ ಚೆನ್ನಕೇಶವ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಜೋಯಲ್ ಮೆಂಡೋನ್ಸ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಗಣೇಶ್ ನಾವೂರು, ಉಪಾಧ್ಯಕ್ಷರಾದ ಸೀತಾರಾಮ್ ಬೆಳಾಲು, ಕೊರಗಪ್ಪ ಗೌಡ ಹಾಗೂ ಪಕ್ಷದ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಮಟ್ಟದ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!