Saturday, May 4, 2024
Homeಕರಾವಳಿಬೆಳ್ತಂಗಡಿ: ನಡ .ಹಿ.ಪ್ರಾ.ಶಾಲೆಗೆ ಅನುದಾನ ಒದಗಿಸುವ ಭರವಸೆ; ಹರೀಶ್‌ ಕುಮಾರ್‌

ಬೆಳ್ತಂಗಡಿ: ನಡ .ಹಿ.ಪ್ರಾ.ಶಾಲೆಗೆ ಅನುದಾನ ಒದಗಿಸುವ ಭರವಸೆ; ಹರೀಶ್‌ ಕುಮಾರ್‌

spot_img
- Advertisement -
- Advertisement -

ಬೆಳ್ತಂಗಡಿ: ಶತಮಾನದ ಹೊಸ್ತಿಲಲ್ಲಿರುವ ಮಣ್ಣಿನ ಗೋಡೆ ಯಿಂದ ನಿರ್ಮಾಣವಾಗಿದ್ದ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದ.ಕ.ಜಿ.ಪಂ.ಹಿ.ಪ್ರಾ ಶಾಲೆಗೀಗ ನೂತನ ಕಟ್ಟಡದ ಭಾಗ್ಯ ಒದಗಿ ಬಂದಿದ್ದು ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ತನ್ನ ಅನುದಾನದಡಿ 1.50 ಕೋ.ರೂ. ಒದಗಿಸುವ ಭರವಸೆ ನೀಡಿದ್ದಾರೆ.

ಈ ಶಾಲೆಯು 1925ರಲ್ಲಿ ಆರಂಭವಾಗಿದ್ದು 96 ವರ್ಷ ಪೂರೈಸಿದೆ. 1ರಿಂದ 7ನೇ ತರಗತಿಯಿರುವ ಶಾಲೆಯಲ್ಲಿ 2020-21ರಲ್ಲಿ 81 ಮಕ್ಕಳಿದ್ದು, 2021-22ರಲ್ಲಿ 98 ಮಕ್ಕಳ ದಾಖಲಾತಿಯ ಮೂಲಕ 17 ಮಕ್ಕಳು ಹೆಚ್ಚುವರಿಯಾಗಿದ್ದರು. ಇದೀಗ 1ರಿಂದ 7ನೇ ತರಗತಿ ನೂತನ ಕಟ್ಟಡ ರಚನೆಗೆ ತಮ್ಮ ಅನುದಾನದಡಿ 1.50 ಕೋ.ರೂ. ಮಂಜೂರುಗೊಳಿಸುವ ಭರವಸೆ ನೀಡಿದ್ದಾರೆ.

ಈ ವಿಚಾರವಾಗಿ ಹರೀಶ್‌ ಕುಮಾರ್‌ ರವರು ಶಾಲೆಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಬಳಿಕ ನೂತನ ಕಟ್ಟಡ ರಚನೆ ಕುರಿತು ಚರ್ಚಿಸಿದರು. ನಡ ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್‌, ನಡ ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ವಸಂತ ಗೌಡ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್‌, ಮುಖ್ಯ ಶಿಕ್ಷಕಿ ಪುಷ್ಪಾ, ಸಹ ಶಿಕ್ಷಕರಾದ ವಿಕ್ಟರ್‌ ಮಾಡ್ತಾ, ಸುಜಾತಾ ಎಸ್‌., ಮಾಜಿ ಜಿ.ಪಂ. ಸದಸ್ಯ ಶೈಲೇಶ್‌ ಕುಮಾರ್‌, ಗುತ್ತಿಗೆದಾರರಾದ ಆಧೀಶ್‌, ನಿಶ್ಚಲ್‌ ಉಪಸ್ಥಿತರಿದ್ದರು.ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶತಮಾನದಂಚಿನ ಶಾಲಾ ಕಟ್ಟಡದ ಸ್ಥಿತಿ ಗಮನಿಸಿ ನೂತನ ಕಟ್ಟಡ ರಚನೆಗೆ ಅನುದಾನ ಒದಗಿಸುತ್ತಿದ್ದೇನೆ. ನನ್ನ ಮನೆಯ ಸಮೀಪವೇ ಇರುವ ಶಾಲೆಯಾದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಹರೀಶ್‌ ಕುಮಾರ್‌ ಹೇಳಿದರು.

- Advertisement -
spot_img

Latest News

error: Content is protected !!