Friday, May 17, 2024
Homeಕ್ರೀಡೆಮೂವರಿಗೂ ಗೊತ್ತಿಲ್ಲದೆ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್​​​ಗೆ ಬಂದಿದ್ದಾನೆ ಮತ್ತೊಬ್ಬ..! ತ್ರಿಮೂರ್ತಿಗಳಿಗೆ ಟಕ್ಕರ್ ಕೊಡ್ತಿದ್ದಾರೆ ಹಾರ್ದಿಕ್

ಮೂವರಿಗೂ ಗೊತ್ತಿಲ್ಲದೆ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್​​​ಗೆ ಬಂದಿದ್ದಾನೆ ಮತ್ತೊಬ್ಬ..! ತ್ರಿಮೂರ್ತಿಗಳಿಗೆ ಟಕ್ಕರ್ ಕೊಡ್ತಿದ್ದಾರೆ ಹಾರ್ದಿಕ್

spot_img
- Advertisement -
- Advertisement -

ಬೆಂಗಳೂರು : ಕೆಜಿಎಫ್ ಡೈಲಾಗ್​ ಈಗ ಟೀಂ ಇಂಡಿಯಾಗೆ ಸಖತ್ ಸೂಟ್ ಆಗ್ತಿದೆ. ಕೆಜಿಎಫ್​ ಪಡೆಯೋಕೆ ರಣಹದ್ದುಗಳು ಹೇಗೆ ಕಾಯ್ತಿದ್ದವೋ ಹಾಗೆ ಟೀಂ ಇಂಡಿಯಾ ನಾಯಕನಾಗಲು ಕೆಲ ಆಟಗಾರರು ಕಾಯ್ತಾ ಕುಳಿತಿದ್ದಾರೆ. ಗರುಡ ಸತ್ತ ನಂತರ ಹೇಗೆ ಕೆಜಿಎಫ್ ಪಡೆಯಲು ಅವರವರ ನಡುವೆ ಫೈಟ್ ಬೀಳುತ್ತೋ, ಹಾಗೆ ರೋಹಿತ್ ಶರ್ಮಾ ನಂತರ ಕ್ಯಾಪ್ಟನ್ ಆಗಲು ಕೆಲ ಆಟಗಾರರ ನಡುವೆ ಫೈಟ್ ಬಿದ್ದಿದೆ. ರೋಹಿತ್ ಬಳಿಕ ಟೀಂ ಇಂಡಿಯಾ ನಾಯಕತ್ವಕ್ಕೆ ಮೂವರ ನಡುವೆ ರೇಸ್ ಇದೆ ಅಂತ ನಿಮಗೂ ಗೊತ್ತು. ಆದ್ರೆ ಯಾರಿಗೂ ಗೊತ್ತಿಲ್ಲದ ಹಾಗೆ ಇನ್ನೊಬ್ಬ ಈ ರೇಸ್​​ನಲ್ಲಿದ್ದಾನೆ. ಅಷ್ಟೇ ಅಲ್ಲ, ರೇಸ್​​​ನಲ್ಲಿ ಈ ಮೂವರಿಗಿಂತ ಮುಂದಿದ್ದಾನೆ ಕೂಡ. ಆತನೇ ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್​ ಬಳಿಕ ಟೀಂ ಇಂಡಿಯಾದಿಂದ ಡ್ರಾಪ್ ಆದ್ರು. ಫಿಟ್ನೆಸ್ ಮತ್ತು ಕಳಪೆ ಫಾರ್ಮ್​ ಎರಡೂ ಕೈಕೊಟ್ಟಿದ್ದರಿಂದ ಟಿ20 ವರ್ಲ್ಡ್​ಕಪ್ ಬಳಿಕ ಅವರು ಯಾವ್ದೇ ಮ್ಯಾಚ್ ಆಡಲಿಲ್ಲ. ಎನ್​ಸಿಎಗೆ ಬಂದು ಫಿಟ್ನೆಸ್ ಟೆಸ್ಟ್​​ ಪಾಸ್ ಮಾಡಿ ಈಗ ಐಪಿಎಲ್ ಆಡ್ತಿದ್ದಾರೆ. ಕೇವಲ ಆಟಗಾರನಾಗಿ ಮಾತ್ರವಲ್ಲ, ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಸಹ ಪಾಂಡ್ಯನೇ.

ಟೈಟನ್ಸ್ ಆಡಿರೋ ಐದು ಪಂದ್ಯದಲ್ಲೂ ತಮ್ಮ ಆಲ್​ರೌಂಡ್ ಆಟದಿಂದ ಹಾರ್ದಿಕ್ ಪಾಂಡ್ಯ ಮಿಂಚಿದ್ದಾರೆ. 5 ಮ್ಯಾಚ್​ನಿಂದ 4 ವಿಕೆಟ್ ಪಡೆದು, 228 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಹಾಫ್ ಸೆಂಚುರಿಗಳೂ ಇವೆ. ಅಷ್ಟೇ ಅಲ್ಲ, ಗರಿಷ್ಠ ರನ್ ಸರದಾರರ ಲಿಸ್ಟ್​​ನಲ್ಲಿ ನಿನ್ನೆ ಸೆಕೆಂಡ್ ಪ್ಲೇಸ್​​ನಲ್ಲಿದ್ದರು. ಇನ್ನು ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್, ಐದರಲ್ಲಿ ನಾಲ್ಕು ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ ಟಾಪ್​​ನಲ್ಲಿದೆ.

ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಅವಧಿ ಮುಂದಿನ ವರ್ಷಕ್ಕೆ ಕ್ಲೋಸ್ ಆಗಲಿದೆ. ಭವಿಷ್ಯದ ಟೀಂ ಇಂಡಿಯಾ ನಾಯಕನಾಗಲು ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್​​ ಫೈಟ್ ನಡೆಸ್ತಿದ್ದಾರೆ. ನಮ್ಮಲ್ಲೇ ಒಬ್ಬರು ರೋಹಿತ್​ ಬಳಿಕ ಕ್ಯಾಪ್ಟನ್ ಆಗ್ತಿವಿ ಅಂತ ಅಂದುಕೊಂಡಿದ್ದಾರೆ. ಕ್ರಿಕೆಟ್ ಫ್ಯಾನ್ಸ್​, ಕ್ರಿಕೆಟ್​ ಪಂಡಿತರೂ ಸಹ ಇದನ್ನೇ ಹೇಳ್ತಿರೋದು. ಆದ್ರೆ ಈ ಯಾರಿಗೂ ಗೊತ್ತಿಲ್ಲದ ಹಾಗೆ ಕ್ಯಾಪ್ಟನ್ಸಿ ರೇಸ್​​ಗೆ ಮರಳಿದ್ದಾರೆ ಹಾರ್ದಿಕ್. ರೇಸ್​​ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಕೂಡ.

ಐಪಿಎಲ್​​​ನಲ್ಲಿ ರಾಹುಲ್, ಶ್ರೇಯಸ್​ ಮತ್ತು ಪಂತ್ ನಾಯಕತ್ವ ಪರವಾಗಿಲ್ಲ ಅನ್ನೋ ಹಾಗಿದೆ. ಆದರೆ ಈ ಮೂವರು ನಾಯಕರಾದ್ಮೇಲೆ ತಮ್ಮ ವೈಯಕ್ತಿಕ ಆಟವನ್ನ ಮರೆತಿದ್ದಾರೆ. ಆದ್ರೆ ಹಾರ್ದಿಕ್ ಪಾಂಡ್ಯ ಮಾತ್ರ ವೈಯಕ್ತಿಕ ಆಟದ ಜೊತೆ ಗುಜರಾತ್ ತಂಡವನ್ನ ಅದ್ಭುತವಾಗಿ ಲೀಡ್ ಮಾಡ್ತಿದ್ದಾರೆ. ಆ ಮೂವರನ್ನ ಹಿಂದಿಕ್ಕಿ ರೋಹಿತ್ ಬಳಿಕ ಹಾರ್ದಿಕ್ ಟೀಂ ಇಂಡಿಯಾ ನಾಯಕನಾದ್ರೂ ಆಶ್ಚರ್ಯವಿಲ್ಲ.

- Advertisement -
spot_img

Latest News

error: Content is protected !!