Wednesday, July 2, 2025
Homeಕರಾವಳಿಅನ್ಯಕೋಮಿನ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ:  ಆರೋಪಿಯನ್ನು ಬಂಧಿಸಿದ ಪೊಲೀಸರು

ಅನ್ಯಕೋಮಿನ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ:  ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ಕಡಬ: ಅನ್ಯಕೋಮಿನ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಯುವತಿಯೊಬ್ಬಳು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆಯ ಯುವತಿಯೊಬ್ಬಳಿಗೆ ಕಳೆದ ಎರಡು ದಿನಗಳಿಂದ ಅನ್ಯಕೋಮಿನ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ. ನಿನ್ನೆ ( ಮಾರ್ಚ್ 28) ಕಲ್ಲಾಜೆಯ ರಸ್ತೆಯಲ್ಲಿ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಶಕೀರ್ ಎಂಬ ಯುವಕ ಆಕೆಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇನ್ನು ಈ ಬಗ್ಗೆ ಯುವತಿ ತನ್ನ ಮನೆಯವರಿಗೆ ವಿಷಯ ತಿಳಿಸಿದ್ದು, ಮರುದಿನ ಆಕೆಯ ಜೊತೆ ಮನೆಯವರು ಬಂದಿದ್ದಾರೆ. ಈ ವೇಳೆ ಯುವಕ, ಯುವತಿ ಮೇಲೆ ಕೈ ಹಾಕಿದ್ದು, ಬಿಡಿಸಲು ಬಂದ ಯುವತಿಯ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

 ಈ ವಿಚಾರ ಗೊತ್ತಾಗುತ್ತಿದ್ದಂತೆ ಕಡಬ ಠಾಣೆಗೆ ಆಗಮಿಸಿದ, ಹಿಂದೂ ಸಂಘಟನೆಯ ಕಾರ್ಯಕರ್ತರು ಯುವಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

- Advertisement -
spot_img

Latest News

error: Content is protected !!