ಬೆಳ್ತಂಗಡಿ: ಅಲ್ಪಕಾಲದ ಅಸೌಖ್ಯದಿಂದ ನಗರದ ಹಿರಿಯ ರಿಕ್ಷಾ ಚಾಲಕ ಹಾಗೂ ಸಾಮಾಜಿಕ ಮುಂದಾಳು, ಆಂಬುಲೆನ್ಸ್ ಚಾಲಕ ಹಮೀದ್ ಅವರ ತಂದೆ ಹೆಚ್.ಎಂ ಮೊಯಿದಿನ್ ಲಾಯಿಲ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ.

ಕೆಲದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೆರು ಉಂಟಾದ ಕಾರಣ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಅಸುನೀಗಿದ್ದಾರೆ.
ರಿಕ್ಷಾ ಚಾಲಕರಾಗಿ ಎಲ್ಲರ ಪರಿಚಿತರಾಗಿದ್ದ ಮೊಯಿದಿನ್ ಅವರು ಸಮಾಜ ಸೇವಕರೂ ಆಗಿದ್ದರು.
ಕಠಿಣ ದುಡಿಮೆಯ ಆದರ್ಶದೊಂದಿಗೆ ಕ್ರಿಯಾಶೀಲತೆ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು. ಲಾಯಿಲ ಮಸೀದಿಯ ಆಡಳಿತ ಮಂಡಳಿಯ ಪದಾಧಿಕಾರಿಯಾಗಿ, ಲಾಯಿಲ ಪಂಚಾಯತ್ ಸದಸ್ಯರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ನೀಡಿದ್ದರು.
ಮೃತರ ಅಂತ್ಯಸಂಸ್ಕಾರ ವಿಧಿಗಳು ಶುಕ್ರವಾರ ಕಿಲ್ಲೂರು ಮಸೀದಿಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದ್ದು, ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.