Friday, June 5, 2026
Homeಇತರಮಾಜಿ ಪ್ರಧಾನಿ ದೇವೇಗೌಡರಿಗೂ ಕೊರೊನಾ ಆತಂಕ

ಮಾಜಿ ಪ್ರಧಾನಿ ದೇವೇಗೌಡರಿಗೂ ಕೊರೊನಾ ಆತಂಕ

- Advertisement -
- Advertisement -

ಬೆಂಗಳೂರು : ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ತಮಗೆ ಕೊರೊನಾ ಪಾಸಿಟಿವ್ ಅನ್ನೋ ಮಾಹಿತಿ ನೀಡುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರುವಾಗಿದೆ. ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡ ಅವರು ಇದೀಗ ಕೋವಿಡ್ -19 ಆತಂಕ ಎದುರಿಸುವಂತಾಗಿದೆ.

ಜುಲೈ 4 ರಂದು ಶಾಸಕ ಶರತ್ ಬಚ್ಚೇಗೌಡ ಅವರು ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದರು. ದೇವೇಗೌಡರ ನಿವಾಸದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರಿಂದಾಗಿ ಇದೀಗ ಅವರಿಗೆ ಕೊರೊನಾ ಸೋಂಕಿನ ಆತಂಕ ಎದುರಾಗಿದೆ. ಇನ್ನು ಈಗಾಗಲೇ ಶರತ್ ಬಚ್ಚೇಗೌಡ ಅವರೇ ಹೇಳಿದ್ದಾರೆ. ನನಗೆ ಪಾಸಿಟವ್ ಅಂತಾ ಗೊತ್ತಾಗುತ್ತಿದ್ದಂತೆ, ನಾನು ನನ್ನ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆಲ್ಲಾ ಮಾಹಿತಿ ನೀಡಿದ್ದೇನೆ ಎಂದು. ಹಾಗಾಗಿ ದೇವೇಗೌಡರಿಗೆ ಮಾಹಿತಿ ನೀಡಿರುವ ಸಾಧ್ಯತೆ ಇರೋದರಿಂದ ಅವರು ಕೂಡ ಕ್ವಾರಂಟೈನ್ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!