Wednesday, May 8, 2024
Homeತಾಜಾ ಸುದ್ದಿರಾಜ್ಯದಿಂದ ಕಾಶಿ ಯಾತ್ರಾರ್ಥಿಗಳ ಸಬ್ಸಿಡಿ ಮಾರ್ಗಸೂಚಿ ಪ್ರಕಟ : ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಜಾರಿ

ರಾಜ್ಯದಿಂದ ಕಾಶಿ ಯಾತ್ರಾರ್ಥಿಗಳ ಸಬ್ಸಿಡಿ ಮಾರ್ಗಸೂಚಿ ಪ್ರಕಟ : ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ಜಾರಿ

spot_img
- Advertisement -
- Advertisement -

ಬೆಂಗಳೂರು: ಸಹಾಯಧನದ ಮೂಲಕ ರಾಜ್ಯದಿಂದ ಕಾಶಿ ಯಾತ್ರೆಗೆ ರಾಜ್ಯ ಸರ್ಕಾರದಿಂದ ಅಂತಿಮ ಮಾರ್ಗಸೂಚಿ ಪ್ರಕಟಗೊಂಡಿದೆ. ಮಾರ್ಗಸೂಚಿ ಅಂತಿಮಗೊಳಿಸಿ ರಾಜ್ಯ ಸರಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ.

ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ಸಿಗಲಿದ್ದು, ಏಪ್ರಿಲ್‌ ಒಂದರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.

ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ.ಸಹಾಯಧನ ಯೋಜನೆಗೆ ಮಾರ್ಗಸೂಚಿ ಇಂದು ಅಂತಿಮಗೊಳಿಸಲಾಗಿದೆ.

ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ವೋಟರ್ ಐಡಿ, ಆಧಾರ್‌ ಕಾರ್ಡ್ ಅಥವಾ
ರೇಷನ್ ಕಾರ್ಡ್ ಹೊಂದದಿರುವುದು ಕಡ್ಡಾಯವಾಗಿದೆ.

ಇನ್ನು ಕಾಶಿಗೆ ತೆರಳುವ ಯಾತ್ರಾರ್ಥಿಗಳು ಆಯಾ ವರ್ಷದ ಏಪ್ರಿಲ್‌ 1ಕ್ಕೆ 18 ವರ್ಷ ಮೇಲ್ಪಟ್ಟವರಾಗಿರಬೇಕು ಮತ್ತುವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆ ಹಾಜರುಪಡಿಸಬೇಕು. ನಂತರ ಏಪ್ರಿಲ್ ಒಂದರಿಂದ ಜೂನ್ 30 ರವರೆಗೆ ಕಾಶಿಗೆ ತೆರಳಿದ ಯಾತ್ರಾರ್ಥಿಗಳು ಸಂಬಂಧಿಸಿದ ದಾಖಲಾತಿ ಧಾರ್ಮಿಕ ದತ್ತಿ ಇಲಾಖೆ ಕಛೇರಿಗೆ ಸಲ್ಲಿಸಬೇಕು.

ಇದರ ಜೊತೆಗೆ ಒಂದು ಬಾರಿ ಅನುದಾನ ಪಡೆದ ವ್ಯಕ್ತಿಗೆ ಎರಡನೇ ಬಾರಿ ಅನುದಾನ ಸಿಗುವುದಿಲ್ಲ. ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್‌ ಖಾತೆಯು ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು.

- Advertisement -
spot_img

Latest News

error: Content is protected !!