Tuesday, June 6, 2023
Homeಕರಾವಳಿಸುಳ್ಯ; ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಯುವತಿ ಮನೆಯವರ ವಿರೋಧ; ಮನೆ ಬಿಟ್ಟು ಹೋಗಿ ಮದುವೆಯಾದ ಗ್ರಾ.ಪಂ....

ಸುಳ್ಯ; ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಯುವತಿ ಮನೆಯವರ ವಿರೋಧ; ಮನೆ ಬಿಟ್ಟು ಹೋಗಿ ಮದುವೆಯಾದ ಗ್ರಾ.ಪಂ. ಸದಸ್ಯ

- Advertisement -
- Advertisement -

ಸುಳ್ಯ; ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಯುವತಿ ಮನೆಯವರ ವಿರೋಧವಿದ್ದ ಕಾರಣ ಯುವತಿಯೊಂದಿಗೆ ಮನೆ ಬಿಟ್ಟು ಹೋಗಿ ಮಂಗಳೂರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ವಿವಾಹವಾದ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ.

ಗುತ್ತಿಗಾರಿನ ಬಾಕಿಲದ ಆನಂದ ಎಂಬರ ಪುತ್ರ ಜಗದೀಶ್ ಮತ್ತು ದೇವಚಳ್ಳ ಗ್ರಾಮದ ಅಡ್ಡನಪಾರೆ ನಿವಾಸಿ ಜನಾರ್ದನ ಅವರ ಪುತ್ರಿ ಪ್ರತಿಮಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತಿದ್ದರೆನ್ನಲಾಗಿದೆ. ಆದರೆ ಮದುವೆಗೆ ಯುವತಿ ಮನೆಯವರ ವಿರೋಧವಿತ್ತೆನ್ನಲಾಗಿದೆ. ಆದ್ದರಿಂದ ಮನೆ ಬಿಟ್ಟು ತೆರಳಿದ ವಧು ಮತ್ತು ವರ ಮಂಗಳೂರಿನಲ್ಲಿ ಮದುವೆಯಾಗಿಗ್ದಾರೆ.

ಇನ್ನು ಇತ್ತ ಯುವತಿಯ ತಾಯಿ ಸುಬ್ರಹ್ಮಣ್ಯ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ದೂರು ದಾಖಲಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯನ್ನು ಸಂಪರ್ಕಿಸಿರುವ ವಧೂವರರು  ತಾವು ಮದುವೆ ಆಗಿರುವ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!