Friday, May 17, 2024
Homeಕರಾವಳಿಬೆಳ್ತಂಗಡಿ: ಉಜಿರೆಯಲ್ಲಿ ಸರ್ಕಾರಿ ಶಾಲೆ ಛಾವಣಿ ಕುಸಿತ; ಸ್ವಲ್ಪದರದಲ್ಲೇ ತಪ್ಪಿದ ಭಾರೀ ಅನಾಹುತ

ಬೆಳ್ತಂಗಡಿ: ಉಜಿರೆಯಲ್ಲಿ ಸರ್ಕಾರಿ ಶಾಲೆ ಛಾವಣಿ ಕುಸಿತ; ಸ್ವಲ್ಪದರದಲ್ಲೇ ತಪ್ಪಿದ ಭಾರೀ ಅನಾಹುತ

spot_img
- Advertisement -
- Advertisement -

ಬೆಳ್ತಂಗಡಿ: ಸರ್ಕಾರಿ ಶಾಲೆಯ ಛಾವಣಿ ಕುಸಿತವಾಗಿರುವ ಘಟನೆ ಉಜಿರೆಯ ಹಳೇ ಪೇಟೆಯಲ್ಲಿ ನಡೆದಿದೆ. ರಾತ್ರಿ ವೇಳೆ ಛಾವಣಿ ಕುಸಿದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಶಾಲೆಯ ಛಾವಣಿಯ ಭಾಗ ಕುಸಿದು ಬಿದ್ದಿದೆ.

ಈ ಶಾಲೆಯ ಹಳೆಯ ಹಂಚಿನ ಮೇಲ್ಛಾವಣಿ ಸಭಾ ಭವನವು ಕಳೆದ ಹಲವು ಸಮಯಗಳಿಂದ ಬೀಳುವ ಸ್ಥಿತಿಯಲ್ಲಿ ಇತ್ತು. ಸಂಬಂಧಪಟ್ಟವರಿಗೆ ದುರಸ್ತಿಗಾಗಿ ತಿಳಿಸಿದರೂ, ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರಸಕ್ತ ಕಟ್ಟಡದ ಒಂದು ಭಾಗದ ಛಾವಣಿ ಕುಸಿದಿದ್ದು, ಉಳಿದ ಭಾಗ ಶಿಥಿಲ ಪಕ್ಕಾಸೊಂದರ ಆಧಾರದಲ್ಲಿ ನಿಂತಿದೆ. ಈ ಪಕ್ಕಾಸು ಮುರಿದರೆ ಛಾವಣಿಯ ಹೆಚ್ಚಿನ ಭಾಗ ಕುಸಿದು ಬೀಳುವ ಸಾಧ್ಯತೆ ಇದೆ. ಒಂದರಿಂದ ಏಳನೇ ತರಗತಿವರೆಗೆ 123 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದು, ಛಾವಣಿ ಕುಸಿತವಾದ ಕಟ್ಟಡದಲ್ಲೂ ಕೆಲವು ಸಲ ಪಾಠ ಪ್ರವಚನಗಳು ನಡೆಯುತ್ತಿದ್ದವು. ಶಾಲೆಯ ಈ ಕಟ್ಟಡ 44 ವರ್ಷ ಹಳೆಯದಾಗಿದ್ದು, ದುರಸ್ತಿ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಗೂ ಮನವಿ ಸಲ್ಲಿಸಲಾಗಿತ್ತು ಎಂದು ಶಾಲಾಭಿವೃದ್ಧಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಕಟ್ಟಡದ ದುರಸ್ತಿಯ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!