Sunday, April 28, 2024
HomeUncategorizedಸರ್ಕಾರಿ ಶಾಲೆಗಳು ಅಂದ್ರೆ ಕಮ್ಮಿನಾ?: ಶಾಲೆಯ ಅಡಿಕೆ ತೋಟದಿಂದ ಬಂದ ಆದಾಯದಿಂದ ಶಾಲೆಗೆ ಬಸ್ ಖರೀದಿ;...

ಸರ್ಕಾರಿ ಶಾಲೆಗಳು ಅಂದ್ರೆ ಕಮ್ಮಿನಾ?: ಶಾಲೆಯ ಅಡಿಕೆ ತೋಟದಿಂದ ಬಂದ ಆದಾಯದಿಂದ ಶಾಲೆಗೆ ಬಸ್ ಖರೀದಿ; ರಾಜ್ಯಕ್ಕೆ ಮಾದರಿಯಾದ ಬಂಟ್ವಾಳದ ಮಿತ್ತೂರಿನ ಸರ್ಕಾರಿ ಶಾಲೆ

spot_img
- Advertisement -
- Advertisement -

ಬಂಟ್ವಾಳ :  ಸರ್ಕಾರಿ ಶಾಲೆ ಅಂದ್ರೆ ಇಷ್ಟೇನಾ ಅನ್ನೋರಿಗೆ ಈ ಶಾಲೆಯೊಂದು ಸೆಡ್ಡು ಹೊಡೆದು ನಿಂತಿದೆ. ಸರ್ಕಾರಿ ಶಾಲೆಯೊಂದನ್ನು ಹೀಗೂ ನಿರ್ವಹಿಸಬಹುದು ಎಂಬುವುದಕ್ಕೆ ಈ ಸರ್ಕಾರಿ ಶಾಲೆಯೇ ಉದಾಹರಣೆ.

ಬಂಟ್ವಾಳ ತಾಲೂಕಿನ ಗಡಿಗ್ರಾಮಗಳಲ್ಲೊಂದಾದ ಮಿತ್ತೂರಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 628 ಅಡಿಕೆ ಮರಗಳಿದ್ದು, ಇದರಿಂದ ಬಂದ  ಫಲದಿಂದ ದೊರೆತ ಆರ್ಥಿಕ ಆದಾಯದಿಂದ ಸರ್ಕಾರಿ ಶಾಲೆಯೊಂದು ಬಸ್ ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದೆ ಈ ಶಾಲೆ. ಇದೇ ಬಸ್ ನಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲಾಗುತ್ತಿದೆ.

ಇನ್ನು ಶಾಲೆಗೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಬಸ್​ಗೆ ಚಾಲನೆ ನೀಡಿ, ಶಾಲೆಗೆ ಮತ್ತಷ್ಟು ನೆರವುಗಳನ್ನು ಘೋಷಿಸಿದರು. ಇದೀಗ ಶಾಲೆ ಮಕ್ಕಳು ಬಸ್ಸು ಹತ್ತಿ ಶಾಲೆಗೆ ಆಗಮಿಸಿ ಸಂಭ್ರಮಪಟ್ಟರು.

- Advertisement -
spot_img

Latest News

error: Content is protected !!