Saturday, May 4, 2024
Homeತಾಜಾ ಸುದ್ದಿಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ಬದಲಾಗಿ ಹಣ ನೀಡಲು ಸರ್ಕಾರ ತೀರ್ಮಾನ; ಅಕ್ಕಿ ಬದಲು...

ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿ ಬದಲಾಗಿ ಹಣ ನೀಡಲು ಸರ್ಕಾರ ತೀರ್ಮಾನ; ಅಕ್ಕಿ ಬದಲು ಫಲಾನುಭವಿಗಳಿಗೆ ಖಾತೆಗೆ  ಬೀಳಲಿದೆ ತಲಾ 170 ರೂಪಾಯಿ

spot_img
- Advertisement -
- Advertisement -

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿಯಲ್ಲಿ ಜುಲೈ.1ರಿಂದ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ನೀಡುವುದಾಗಿ ಈಗಾಗಲೇ ಸರ್ಕಾರ ಘೋಷಣೆ ಮಾಡಿತ್ತು. ಆದ್ರೇ ಅಕ್ಕಿ ದೊರೆಯದ ಕಾರಣ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಸಚಿವ  ಮುನಿಯಪ್ಪ, ಐದು ಕೆಜಿ ಅಕ್ಕಿ ಬದಲಾಗಿದೆ ಹಣ ನೀಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಒಂದು ಕೆಜಿ ಅಕ್ಕಿಗೆ ರೂ.34 ನೀಡಲು ನಿರ್ಧರಿಸಲಾಗಿದೆ. ಜುಲೈ1ರಂದು ಫಲಾನುಭವಿಗಳಿಗೆ ಖಾತೆಗೆ ತಲಾ 170 ರೂಪಾಯಿಗಳನ್ನು ಜಮೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಅಗ್ಯ ಅಕ್ಕಿ ದಾಸ್ತಾನು ಆಗೋವರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡಲಾಗುತ್ತದೆ. ಅಕ್ಕಿ ಸಿಕ್ಕ ನಂತ್ರ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂಬುದಾಗಿ ಘೋಷಣೆ ಮಾಡಿದರು.

- Advertisement -
spot_img

Latest News

error: Content is protected !!