- Advertisement -
- Advertisement -
ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ನೂತನ ಮುಖ್ಯಾಧಿಕಾರಿಯಾಗಿ ಗೋಪಾಲ ನಾಯ್ಕ ಅವರು ಅಧಿಕಾರ ಸ್ವೀಕರಿಸಿದರು.
ಎರಡು ತಿಂಗಳ ಹಿಂದೆ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ರಮೇಶ್ ಅವರು ವರ್ಗಾವಣೆಗೊಂಡಿದ್ದಾರೆ. ಗೋಪಾಲ್ ನಾಯ್ಕ ಈ ಹಿಂದೆ ಮೂಡಬಿದ್ರೆ ಪುರಸಭೆಯ ಸಮುದಾಯ ಸಂಘಟನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮುಖ್ಯಾಧಿಕಾರಿ ರಮೇಶ್ ಅವರು ಗೋಪಾಲ್ ನಾಯ್ಕ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
- Advertisement -