Sunday, May 5, 2024
Homeತಾಜಾ ಸುದ್ದಿಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದ ಗೂಗಲ್: ಕನ್ನಡ ಕೊಳಕು ಭಾಷೆ ಎಂದ ಗೂಗಲ್

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದ ಗೂಗಲ್: ಕನ್ನಡ ಕೊಳಕು ಭಾಷೆ ಎಂದ ಗೂಗಲ್

spot_img
- Advertisement -
- Advertisement -

ಬೆಂಗಳೂರು: ಕನ್ನಡ ಭಾಷೆಗೆ ತನ್ನದೇ ಆದಂತ ಐತಿಹಾಸಿಕ ಸ್ಥಾನಮಾನವಿದೆ. ಪ್ರಾಚೀನ ಭಾಷೆಯಗಳ ಪಟ್ಟಿಯನ್ನು ಕನ್ನಡ ಸ್ಥಾನ ಪಡೆದಿದೆ. ಇಂತಹ ಕನ್ನಡ ಭಾಷೆಯ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದ್ರೇ.. ಕನ್ನಡ ಕೊಳಕು ಭಾಷೆ ಎನ್ನುವ ಮೂಲಕ, ಗೂಗಲ್ ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕಿದೆ.

ಹೌದು.. ಗೂಗಲ್ ಸರ್ಚ್ ಇಂಜಿನ್ ನಲ್ಲಿ ನೀವು ಕನ್ನಡ ಎಂಬುದಾಗಿ ಸರ್ಚ್ ಮಾಡಿದ್ರೇ.. ಕನ್ನಡವನ್ನು ಕೊಳಕು ಭಾಷೆ ಎಂದು ಅಪಮಾನಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಗೂಗಲ್ ವಿರುದ್ಧ ಆಕ್ರೋಶ ಕೂಡ ಹೊರಹಾಕುತ್ತಿದ್ದಾರೆ. ಅಲ್ಲದೇ ಕನ್ನಡಿಗರ ಅಭಿಮಾನವನ್ನು ಕೆಣಕಿದ್ರೆ.. ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ, ಇದು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಕನ್ನಡ ಭಾಷೆಯ ಬಗ್ಗೆ ಗೂಗಲ್ ಮಾಡಿರುವಂತ ಈ ವಿಚಾರದ ಬಗ್ಗೆ ನಾವು ಕಾನೂನು ಹೋರಾಟಕ್ಕೆ ಇಳಿಯುತ್ತೇವೆ. ಕನ್ನಡ ಭಾಷೆಗೆ ಕೊಳಕು ಸ್ಥಾನ ನೀಡಿದಂತ ಗೂಗಲ್ ಗೆ ಲೀಗಲ್ ನೋಟಿಸ್ ನೀಡಲಾಗುತ್ತದೆ. ನೆಲ, ಜಲ, ಭಾಷೆ, ಸಂಸ್ಕೃತಿಯ ವಿಚಾರದಲ್ಲಿ ಯಾವತ್ತೂ ಅವಮಾನಿಸೋದನ್ನು ಸಹಿಸೋದಿಲ್ಲ ಎಂಬುದಾಗಿ ಎಚ್ಚರಿಸಿದ್ದಾರೆ.

- Advertisement -
spot_img

Latest News

error: Content is protected !!